ನಿವೃತ್ತ ಪ್ರಾಂಶುಪಾಲ ಎಚ್.ಆರ್.ಸಿದ್ದೇಗೌಡ ಮಾತನಾಡಿ, ಮಾಸ್ತಮ್ಮ ಅವರು ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡಾಕ್ಟರ್ ಇಲ್ಲದ ವೇಳೆ ಹಾಡಿಗಳಲ್ಲಿ ಆರೋಗ್ಯ ಸೇವೆ ನೀಡಿ ಮಾನವೀಯತೆಯ ಮಹಾತಾಯಿ ಎನಿಸಿದ್ದಾರೆ. ಸರ್ಕಾರ ಇನ್ನಷ್ಟು ಆರ್ಥಿಕ ನೆರವು ನೀಡಬೇಕಿದೆ ಎಂದರು. ಆದಿವಾಸಿ ಮುಖಂಡರಾದ ಹರ್ಷ, ಜಯಪ್ಪ, ಲಕ್ಷ್ಮೀ, ಶಿವಣ್ಣ, ಶಾರದಾ, ಪ್ರಕಾಶ್, ರಾಜು ಹೆತ್ತಪ್ಪ, ಡಾ.ಶ್ರೀಕಾಂತ್ ಇದ್ದರು.