ತಲಕಾಡಿನ ಗೌತಮಿ ಟ್ರಸ್ಟ್‌ನ ಕೃಷ್ಣಮೂರ್ತಿ ಕಲಾ ತಂಡದ ಡೊಳ್ಳು ಕುಣಿತ, ನಗಾರಿ ತಂಡ, ಮದ್ದೂರು ತಾಲೂಕಿನ ನಂಜಿನಾಯಕನಹಳ್ಳಿಯ ಮಹಿಳಾ ಕೋಲಾಟ ಸಂಘ, ಮಳವಳ್ಳಿ ತಾಲೂಕಿನ ಕೋರೆಗಾಲದ ಪಟದ ಕುಣಿತ, ಎಚ್.ಡಿ.ಕೋಟೆ ತಾಲೂಕಿ ಆದಿವಾಸಿ ಕಲಾ ತಂಡ, ಕೆಂಪಿಸಿದ್ದನಹುಂಡಿಯ ಮಹದೇವು ನೇತೃತ್ವದ ಕಂಸಾಳೆ ತಂಡ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೆಂಗಳೆಯರು ಮೆರವಣಿಗೆಯಲ್ಲಿ ಸಾಗಿದರು. ರಸ್ತೆಯುದ್ದಕ್ಕೂ ವಿವಿಧ ಕಲಾ ತಂಡಗಳು ಆಕರ್ಷಕ ನೃತ್ಯ, ಪ್ರದರ್ಶನ ನೀಡುವ ಮೂಲಕ ಮೆರವಣಿಗೆ ಸೊಬಗು ಹೆಚ್ಚಿಸಿದವು. ಕೃಷಿ ಮೇಳದ ಬಗ್ಗೆ ಅರಿವು ಮೂಡಿಸುವಂತಹ ಬ್ಯಾನರ್‌ಗಳನ್ನು ಹಿಡಿದ ಸಿಬ್ಬಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಗ್ರಾಮೀಣ ಸೊಗಡನ್ನು ಬಿಂಬಿಸುವ ಎತ್ತಿನ ಗಾಡಿಗಳು ಸಹ ಶಿಸ್ತುಬದ್ಧವಾಗಿ ಸಾಗುವ ಮೂಲಕ ಮೆರವಣಿಗೆ ಸೊಬಗನ್ನು ಹೆಚ್ಚಿಸಿದವು.