ಅಮ್ಮಾ ಇಲ್ಲಿ ಬನ್ನೀ, ಆಂಟಿ ಚಕ್ಕುಲಿ, ಕೋಡುಬಳೆ ತಗೊಳ್ಳಿ, ಇದು ಮನೆಯಲ್ಲೇ ತಯಾರಿಸಿದ್ದು, ನಾನೇ ತಯಾರಿಸಿರುವುದು. ಕೇವಲ 5 ರೂ. ಎರಡು ತಗೊಂಡ್ರೆ 10 ರೂ.ತಗೊಳ್ಳಿ ಅಮ್ಮಾ... ತಗೊಳ್ಳಿ ಅಣ್ಣಾ.. ಪ್ಲೀಸ್ ತಗೊಳ್ಳಿ ಮಾಮ... ಎಂದು ಕೂಗಿ ಕರೆಯುತ್ತಿದ್ದ ಚಿಣ್ಣರು ದೈನಂದಿನ ಜೀವನದಲ್ಲಿ ವ್ಯಾಪಾರ-ವಹಿವಾಟಿನ ಬಗ್ಗೆ ಕೆಲ ವಿಚಾರಗಳನ್ನು ತಿಳಿದುಕೊಂಡರು. ಒಟ್ಟಾರೆ ರಂಗಾಯಣದಲ್ಲಿ ತಾಯಿ ಮತ್ತು ಮಗುವಿನ ಬಾಂಧವ್ಯ ಅನಾವರಣಗೊಂಡಿತು. ಚಕ್ಕುಲಿ, ಕೋಡುಬಳೆ, ನಿಪ್ಪಿಟ್ಟು, ಚುರುಮುರಿ, ರವೆ ಉಂಡೆ, ಕಡಲೇಪುರಿ, ಮಿಠಾಯಿ ಇದ್ದರೆ, ಮತ್ತೊಂದೆಡೆ ಎಳನೀರು, ಜ್ಯೂಸ್, ಮಜ್ಜಿಗೆ, ಫ್ರೂಟ್ ಸಲಾಡ್‌ಗಳು ಬಂದಿದ್ದವರ ದಾಹ ತೀರಿಸಿದವು.