ಅಂದು ಬೆಳಗ್ಗೆ 10ಕ್ಕೆ ಶ್ರೀರಂಗಪಟ್ಟಣದ ನಿಮಿಷಾಂತ ದೇವಸ್ಥಾನದ ಆವರಣದಲ್ಲಿ ಸಭೆ ನಡೆಯಲಿದೆ. 11ಕ್ಕೆ ಬೃಹತ್ ಸಂಕೀರ್ತನ ಯಾತ್ರೆ ಅಲ್ಲಿಂದ ಪ್ರಾರಂಭಗೊಂಡು ಶ್ರೀರಂಗಪಟ್ಟಣದ ಕೋಟೆ ತಲುಪಿ ನಂತರ ಮೂಡಲ ಬಾಗಿಲು ಆಂಜನೇಯಸ್ವಾಮಿ ದರ್ಶನ ಪಡೆದು, ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಅದೇ ಮೈದಾನದಲ್ಲಿ ಮಾಲಾ ವಿಸರ್ಜನೆ, ಪ್ರಸಾದ ವಿನಿಯೋಗ ನಡೆಯಲಿದೆ. ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದು ಮುಖಂಡರಾದ ಬಾಲರಾಜ್, ರಂಗಸ್ವಾಮಿ, ಸುಜನ್‌ಗೌಡ, ಲಕ್ಷ್ಮೀ ನಾರಾಯಣ ಇದ್ದರು.