ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸದುದ್ದೇಶದಿಂದ ಸಾಂಕೇತಿಕವಾಗಿ ಜೆ.ಪಿ.ನಗರದ ನಿವಾಸಿಗಳಿಗೆ 3000 ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ಹಂತದಲ್ಲೂ ಪ್ರತಿ ಮನೆಗೆ ಎರಡು ಗಿಡಗಳನ್ನು ವಿತರಣೆ ಮಾಡಲಾಗುವುದು. ಮನೆಯಂಗಳ, ಹಿತ್ತಲು, ಕಾಂಪೌಂಡ್ ಒಳಭಾಗದಲ್ಲಿ ಬೆಳೆಸಬಹುದಾದ ತುಳಸಿ, ದಾಸವಾಳ, ದಾಳಿಂಬೆ, ಗುಲಾಬಿ, ಸೀಬೆ, ವೀಳ್ಯದೆಲೆ, ಕರಿಬೇವು ಮುಂತಾದ ಸಣ್ಣ ಸಸಿಗಳನ್ನು ಮಾತ್ರ ನೀಡುತ್ತಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಖುಷಿ ನೀಡಿದೆ ಎಂದರು.