ಸಾಮಾನ್ಯವಾಗಿ ದಸರಾ ಕವಿಗೋಷ್ಠಿ ಎಂದರೆ ಸಾಹಿತಿಗಳು, ಕವಿಗಳು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಕಾವ್ಯವಾ ಚನಕ್ಕೆ ಸೀಮಿತವಾಗಿರುವ ಚಿತ್ರಣ ಕಾಣುತ್ತದೆ. ಆದರೆ, ಈ ಬಾರಿ ಆ ಚೌಕಟ್ಟನ್ನು ವಿಸ್ತರಿಸುವ ಪ್ರಯತ್ನ ನಡೆದಿದೆ. ರೈತರು, ಶಕ್ತಿಧಾಮದಲ್ಲಿ ನೆಲೆಸಿರುವವರು, ಮನೆಗೆಲಸದಲ್ಲಿ ತೊಡಗಿರುವವರು, ಕೈದಿಗಳು, ಅಂಗವಿಕಲರು ಸೇರಿದಂತೆ ಸಮಾಜದ ವಿವಿಧ ವರ್ಗಗಳಲ್ಲಿರುವ ಕಾವ್ಯಪ್ರತಿಭೆಗಳನ್ನು ಗುರುತಿಸಿ ಅವರಿಗೆ ಕವನ ವಾಚನಕ್ಕೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಉಪಸಮಿತಿ ಹೊಂದಿದೆ. ಈ ವರ್ಗಗಳಲ್ಲಿರುವ ಅರ್ಹರನ್ನು ಸಮಿತಿ ಗುರುತಿಸುವ ಕಾರ್ಯ ಕೈಗೊಳ್ಳಲಿದೆ.