

ಪ್ರಮುಖ ಮುಖ್ಯಾಂಶಗಳು
ನಗರದಲ್ಲಿ ವೆಲೋಡ್ರೋಮ್ ನಿರ್ಮಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ಕೊಟ್ಟಿರುವುದು ಸ್ವಾಗತಾರ್ಹ. ವೆಲೋಡ್ರೋಮ್ ನಿರ್ಮಿಸಲು ಬಜೆಟ್ ಅನುಮೋದನೆ ನೀಡುವ ಮೂಲಕ ಸೈಕ್ಲಿಸ್ಟ್‌ಗಳ ಸಾಧನೆಗೆ ಮುನ್ನುಡಿ ಬರೆದಿದೆ. ರಾಜ್ಯ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಮಗೆ ಮುಂದಿನ ಕ್ರಮ ಕುರಿತು ನಿರ್ದೇಶನ ಬಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ.