32 ಜನರಿಗೆ ರೇಷನ್ ಕಾರ್ಡ್ ಇಲ್ಲ: ನಿವಾಸಿ ಜಯಮ್ಮ, ಪವಿತ್ರಾ ಮಾತನಾಡಿ, ಹಾಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ. 15ಕ್ಕೂ ಹೆಚ್ಚು ಜನರಿಗೆ ಆಧಾರ ಕಾರ್ಡ್ ಇಲ್ಲ. ಕುಟುಂಬಗಳು ಬೆಳೆದಿದ್ದು, ಹೊಸ ಕುಟುಂಬಕ್ಕೆ ಮನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದಾಗ, ಗಿರಿಜನ ಕಲ್ಯಾಣ ಇಲಾಖೆಯಿಂದ ಸತತವಾಗಿ ಹಾಡಿಗಳಿಗೆ ಬಂದು ಆಧಾರ್ ಕಾರ್ಡ್ ಡ್ರೈವ್ ಮಾಡಲಾಗುತ್ತಿದೆ. ಮಾದಯ್ಯನಕಟ್ಟೆ ಹಾಡಿಯಲ್ಲಿ ಬಾಕಿ ಇರುವ ಜನರಿಗೆ ಶೀಘ್ರ ಆಧಾರ್ ಕಾರ್ಡ್ ನೀಡಲಾಗುವುದು. ಹೊಸದಾಗಿ ರೇಷನ್ ಕಾರ್ಡ್ ನೀಡುವ ವ್ಯವಸ್ಥೆಯನ್ನು ಸರ್ಕಾರ ಶೀಘ್ರ ಆನ್‌ಲೈನ್ ಮೂಲಕ ಜಾರಿಗೊಳಿಸಲಿದೆ. ಹಾಡಿಯ ಎಲ್ಲ ಕುಟುಂಬಕ್ಕೂ ರೇಷನ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.