ಶಬ್ಬೀರ್ ನಗರದ ಫಾಜಿಲ್ ಅಹಮದ್-ಅಸ್ಮಿಯಾ ಬಾನು ದಂಪತಿ ಪುತ್ರ ಮಹಮದ್ ರಿಯಾನ್(7) ಮೃತಪಟ್ಟ ಬಾಲಕ. ರಿಹಾನ್ ಮನೆ ಎದುರಿನಲ್ಲಿ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಮಗು ತೀವ್ರವಾಗಿ ಗಾಯಗೊಂಡಿತು. ಮನೆಯಲ್ಲೇ ಇದ್ದ ಪಾಲಕರು ತಕ್ಷಣವೇ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮೃತಪಟ್ಟಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಪಾಲಕರಿಗೆ ಒಪ್ಪಿಸಲಾಯಿತು. ಶಬ್ಬೀರ್‌ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಜರುಗಿತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಐ ತಾಜುದ್ದಿನ್ ತಿಳಿಸಿದ್ದಾರೆ.