ಮೈಸೂರಿನ ನೇತಾಜಿನಗರದ ನಿವಾಸಿ ಶ್ರೀವತ್ಸ ಹಣ ಕಳೆದುಕೊಂಡವರು. ಶ್ರೀವತ್ಸ ಅವರಿಗೆ ಮಾರ್ಚ್ 13 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಟ್ರಾಯ್‌ನಿಂದ ಅಭಿಷೇಕ್ ಮಿಶ್ರಾ ಮಾತನಾಡುವುದಾಗಿ ತಿಳಿಸಿದ್ದಾನೆ. ನಂತರ ಮುಂಬೈನಲ್ಲಿ ಏರ್‌ಟೆಲ್ ಕಂಪನಿಯಿಂದ ಸಿಮ್ ತೆಗೆದುಕೊಂಡು ಹಲವಾರು ಮಹಿಳೆಯರಿಗೆ ಕರೆ ಮಾಡಿ ಅಸಹ್ಯವಾಗಿ ಮಾತನಾಡಿರುವುದಾಗಿ ತಮ್ಮ ವಿರುದ್ಧ ಮುಂಬೈ ಕ್ರೈಮ್ ಬ್ರಾಂಚ್‌ನಲ್ಲಿ ದೂರು ದಾಖಲಾಗಿದೆ ಎಂದು ಹೆದರಿಸಿದ್ದಾನೆ. ಬಳಿಕ +917459008925 ನಿಂದ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ ತಮ್ಮ ವಿರುದ್ಧ ಮನಿ ಲಾಡ್ರಿಂಗ್ ಪ್ರಕರಣ ದಾಖಲಾಗಿದ್ದು, ನರೇಶ್ ಗೋಯಲ್ ಪ್ರಕರಣದ ಪಿರ್ಯಾದುದಾರರ ಬ್ಯಾಂಕ್ ಖಾತೆಗೆ ಹಣ ಬಂದಿರುವುದಾಗಿ ತಿಳಿಸಿದ್ದಾನೆ. ಬಳಿಕ ಹೌಸ್ ಅರೆಸ್ಟ್ ಮಾಡುವುದಾಗಿ ಹೇಳಿ ಮಾರ್ಚ್ 13 ರಿಂದ 17 ರವರೆಗೂ ಸಿಗ್ನಲ್‌ನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಈ ವೇಳೆ ಶ್ರೀವತ್ಸ ಅವರ ಬ್ಯಾಂಕ್ ಖಾತೆಯ ವಿವಿರ ಪಡೆದು, ಪರಿಶೀಲನೆ ಮಾಡುವುದಾಗಿ ಹೇಳಿ ಐಸಿಐಸಿಐ : 072105500872 ಖಾತೆಯ 8,50,047ರೂ.ವನ್ನು ವರ್ಗಾಹಿಸಿಕೊಂಡು ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.