

ಪ್ರಮುಖ ಮುಖ್ಯಾಂಶಗಳು
ಒಂದೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ... ಮತ್ತೊಂದೆಡೆ ಜಲಸಂರಕ್ಷಣೆಯ ಸಂಕಲ್ಪ... ಜಿಲ್ಲೆಯ 85 ಅಮೃತ ಸರೋವರಗಳ ದಡಗಳು ಈ ಬಾರಿ ದೇಶಭಕ್ತಿ ಮತ್ತು ಪರಿಸರ ಜಾಗೃತಿಯ ಅಪೂರ್ವ ವೇದಿಕೆಯಾಗಲಿವೆ.
ಮಳೆ ಅಭಾವ ಮತ್ತು ಅಂತರ್ಜಲ ಕುಸಿತದ ಹಿನ್ನೆಲೆ 85 ಅಮೃತ ಸರೋವರಗಳಲ್ಲೂ ಜಲ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಗುವುದು. ಸ್ವಾತಂತ್ರೃಕ್ಕಾಗಿ ತ್ಯಾಗ ಮಾಡಿದವರನ್ನು ಸ್ಮರಿಸಿ ಗೌರವಿಸುವ ಮೂಲಕ ಈ ಬಾರಿಯ ಸ್ವಾತಂತ್ರೊೃೀತ್ಸವವನ್ನು ಅರ್ಥಪೂರ್ಣಗೊಳಿಸಲಾಗುವುದು.
— ಭೀಮಪ್ಪ ಕ.ಲಾಳಿ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ)
ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ವಿಬಿ ಜಿ ರಾಮ್‌ಜಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ, ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಜಿಲ್ಲೆಯ 85 ಅಮೃತ ಸರೋವರಗಳ ದಂಡೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ.
— - ಎಸ್. ಯುಕೇಶ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ