ಪ್ರಕೃತಿ ವ್ಯಾಪಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ: ರೈತರ ಮುಖಂಡರಿಂದ ದೂರು

ಸಂರಕ್ಷಣೆ ಹೆಸರಿನಲ್ಲಿ ದೇಶದ ಸಾರ್ವಜನಿಕ ಸಂಪತ್ತಾದ ಪ್ರಕೃತಿ ವ್ಯಾಪಾರಕ್ಕೆ ಕೇಂದ್ರ ಸರ್ಕಾರ ಹೊರಟಿ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತ ಮೂಲಕ ರಾಷ್ಟ್ರಪತಿಗೆ ಕೇಂದ್ರ ಸರ್ಕಾರದ ವಿರುದ್ಧ ದೂರು  ನೀಡಲಾಗಿದೆ. ಮಂಜಕಿರಣ್, ಶಿರ್ವಳ್ಳಿ ಮಂಜುನಾಥ್ ಇದ್ದರು.
ಸಂರಕ್ಷಣೆ ಹೆಸರಿನಲ್ಲಿ ದೇಶದ ಸಾರ್ವಜನಿಕ ಸಂಪತ್ತಾದ ಪ್ರಕೃತಿ ವ್ಯಾಪಾರಕ್ಕೆ ಕೇಂದ್ರ ಸರ್ಕಾರ ಹೊರಟಿ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತ ಮೂಲಕ ರಾಷ್ಟ್ರಪತಿಗೆ ಕೇಂದ್ರ ಸರ್ಕಾರದ ವಿರುದ್ಧ ದೂರು ನೀಡಲಾಗಿದೆ. ಮಂಜಕಿರಣ್, ಶಿರ್ವಳ್ಳಿ ಮಂಜುನಾಥ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂರಕ್ಷಣೆ ಎಂಬ ಹೆಸರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದಂತಿದೆ
  • ಸ್ಥಳೀಯರ ಜೀವನೋಪಾಯಕ್ಕೆ ಹಾನಿಯಾಗುವ ಸಂಭವ ಇದೆ
ಮೈಸೂರು:ಸಂರಕ್ಷಣೆ ಹೆಸರಿನಲ್ಲಿ ದೇಶದ ಸಾರ್ವಜನಿಕ ಸಂಪತ್ತಾದ ಪ್ರಕೃತಿ ವ್ಯಾಪಾರಕ್ಕೆ ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ದೂರು ನೀಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ಬಂಡೀಪುರದಲ್ಲಿ ಫೆ.9 ಮತ್ತು 11ರಂದು ಆಯೋಜಿಸಿದ್ದ ಜಾಗತಿಕ ಮಟ್ಟದ ಬಿಗ್ ಕ್ಯಾಟ್ ಸಮ್ಮೇಳನವನ್ನು ಕೇವಲ ಪ್ರಾಣಿ ಸಂರಕ್ಷಣೆ ದೃಷ್ಟಿಯಿಂದ ನೋಡದೆ ಜಾಗತಿಕ ರಾಜಕಾರಣ ಮತ್ತು ಅರ್ಥಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಕೆಲ ಆಘಾತಕಾರಿ ಮತ್ತು ಗಂಭೀರ ಅಂಶಗಳು ಗೋಚರಿಸುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಮ್ಮೇಳನವನ್ನು ತುಲನಾತ್ಮಕ ನೋಟದಲ್ಲಿ ನೀಡಿದಾಗ ಸಂರಕ್ಷಣೆಗಾಗಿ ಎಂಬ ಹೆಸರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದಂತಿದೆ. ಪಾರದರ್ಶಕತೆ ಕೊರತೆಯಿಂದ ಹಣದ ದುರ್ಬಳಕೆಯಾಗುವ ಸಾಧ್ಯತೆ ಇದೆ. ಸ್ಥಳೀಯ ಸಮುದಾಯದ ಬಲವಂತವಾಗಿ ಸ್ಥಳಾಂತರ ಮಾಡುವುದರಿಂದ ಜೀವನೋಪಾಯಕ್ಕೆ ಹಾನಿಯಾಗುವ ಸಂಭವ ಇದೆ ಎನ್ನುವ ಆತಂಕ ವ್ಯಕ್ತಪಡಿಸಲಾಗಿದೆ.
ನಮ್ಮ ಜನರನ್ನೇ, ನಮ್ಮದೇ ಜಾಗದಲ್ಲಿ ಕಳ್ಳರಂತೆ, ದೇಶದ್ರೋಹಿಗಳಂತೆ ನಡೆಸಿಕೊಳ್ಳುವ ಆತಂಕ ಎದುರಾಗಲಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡಿನ ಒಡಲನ್ನು ಸೀಳಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗುತ್ತದೆ, ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡನ್ನು ಖಾಸಗೀಕರಣ ಮಾಡಿ ಕಾಡನ್ನು ಶೋಷಣೆ ಮಾಡುವ ಆತಂಕವಿದೆ ಎಂದು ತಿಳಿಸಲಾಗಿದೆ.
ತಂತ್ರಜ್ಞಾನದ ಹೆಸರಲ್ಲಿ ವ್ಯಾಪಾರ ಮತ್ತು ಡೇಟಾ ಸಾರ್ವಭೌಮತ್ವದ ಸಮಸ್ಯೆ ಉಂಟಾಗುತ್ತದೆ. ಇದು ಪ್ರಬಲ ರಾಷ್ಟ್ರಗಳ ಕಾರ್ಯಸೂಚಿ ನಮ್ಮ ಮೇಲೆ ಹೇರಿಕೆಯಾಗುತ್ತದೆ. ದೊಡ್ಡ ಕಾರ್ಖಾನೆಗಳು ಮಾಡಿದ ಪರಿಸರದ ವಿನಾಶದ ಪಾಪ ಕಳೆದುಕೊಳ್ಳುವ ಇಂಗಾಲದ ಕ್ರೆಡಿಟ್ ದಂಧೆಗೆ ಕೋಟೆ ಬಾಗಿಲು ತೆರೆದುಕೊಳ್ಳುತ್ತಿದೆ ಎಂದು ದೂರಲಾಗಿದೆ.
ಜಾಗತಿಕ ಬಿಗ್ ಕ್ಯಾಟ್ ಸಮ್ಮೇಳನಗಳು ವನ್ಯಜೀವಿಗಳ ಸಂರಕ್ಷಣೆಯ ಬದಲು ಸಂಘರ್ಷಕ್ಕೆ ನಾಂದಿಯಾಗುತ್ತವೆ. ಪ್ರಕೃತಿಯನ್ನು ಹಣಕ್ಕಾಗಿ ಮಾರಿಕೊಳ್ಳುವ ಹೇಯ ಕೃತ್ಯಕ್ಕೆ ನಾಂದಿ ಹಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಟಂತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಸಮಾಜ ವಿರೋಧಿ ಹಾಗೂ ಸಂವಿಧಾನ ವಿರೋಧಿ ನಡೆಯನ್ನು ಅನುಷ್ಠಾನಕ್ಕೆ ಬರಲು ಬಿಡುವುದಿಲ್ಲ. ಈ ಬಗ್ಗೆ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಚುಕ್ಕಿ ನಂಜುಂಡಸ್ವಾಮಿ, ಹೊನ್ನೂರು ಪ್ರಕಾಶ್, ಸಂಘರ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಂಜು ಕಿರಣ್ ಸಹಿ ಮಾಡಿದ ಪತ್ರವನ್ನು ಮಂಜು ಕಿರಣ್, ಜಿಲ್ಲಾ ಅಧ್ಯಕ್ಷ ಮಂಡಳಿಯ ಸದಸ್ಯ ಶಿರ್ವಳ್ಳಿ ಮಂಜುನಾಥ್ ಮನವಿ ಸಲ್ಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net