600 ಬ್ಯಾಗ್ ಯೂರಿಯಾ ಜಪ್ತಿ

ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ತೋಟದಲ್ಲಿ ವಶ ಪಡಿಸಿಕೊಂಡಿರುವ ಯೂರಿಯಾ ರಸಗೊಬ್ಬರ. ದಾಳಿ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ರೂಪಾ, ವಿಶಾಲ್, ರಾಜು, ರಾಮಕೃಷ್ಣ ಇತರರಿದ್ದರು.
ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ತೋಟದಲ್ಲಿ ವಶ ಪಡಿಸಿಕೊಂಡಿರುವ ಯೂರಿಯಾ ರಸಗೊಬ್ಬರ. ದಾಳಿ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ರೂಪಾ, ವಿಶಾಲ್, ರಾಜು, ರಾಮಕೃಷ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ತೋಟದಲ್ಲಿ ಪತ್ತೆ
  • ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಅಧಿಕಾರಿಗಳಿಂದ ದಾಳಿ
  • ಕೃಷಿ ಬಳಕೆ ಮೀಸಲಿಟ್ಟಿರುವ ರಸಗೊಬ್ಬರವಾಗಿದ್ದು, ಕಾಳಸಂತೆ ಮೂಲಕ ಅಕ್ರಮವಾಗಿ ಸಾಗಿಸಿ ಕೈಗಾರಿಕೆ ಉಪಯೋಗಕ್ಕೆ ಸಂಗ್ರಹ
 ಮೈಸೂರು: ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ತೋಟದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 600 ಬ್ಯಾಗ್ ಯೂರಿಯಾ ರಸಗೊಬ್ಬರ ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮದ ಇದಾಯತ್‌ವುಲ್ಲಾ ಅವರ ತೋಟದ ಮೇಲೆ ದಾಳಿ ಮಾಡಿದ ವೇಳೆ ಪತ್ತೆಯಾಗಿದೆ. 
ಇದು ಕೃಷಿ ಬಳಕೆ ಮೀಸಲಿಟ್ಟಿರುವ ರಸಗೊಬ್ಬರವಾಗಿದ್ದು, ಕಾಳಸಂತೆ ಮೂಲಕ ಅಕ್ರಮವಾಗಿ ಸಾಗಿಸಿ ಕೈಗಾರಿಕೆ ಉಪಯೋಗಕ್ಕೆ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದಾಳಿ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ರೂಪಾ, ಕೃಷಿ ಅಧಿಕಾರಿಗಳಾದ ವಿಶಾಲ್, ರಾಜು, ರಾಮಕೃಷ್ಣ, ಮಮತಾ, ಸತೀಶ್, ಶಿವರಾಮು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net