12ನೇ ಶತಮಾನದ ವಚನಗಳು ಪವಿತ್ರ

ನಗರದ ಸರಸ್ವತಿಪುರಂನ ಮಹಿಳಾ ಜೆಎಸ್‌ಎಸ್ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪ್ರಸಾರಂಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಕರ ದೇವನೂರು, ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ.ರೆಚಣ್ಣ, ಆರ್.ಎಸ್.ಕುಮಾರ್ ಹಾಜರಿದ್ದರು.
ನಗರದ ಸರಸ್ವತಿಪುರಂನ ಮಹಿಳಾ ಜೆಎಸ್‌ಎಸ್ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪ್ರಸಾರಂಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಕರ ದೇವನೂರು, ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ.ರೆಚಣ್ಣ, ಆರ್.ಎಸ್.ಕುಮಾರ್ ಹಾಜರಿದ್ದರು.
Published on
ಮೈಸೂರು: ನಮ್ಮ ಧಾರ್ಮಿಕ ಪರಂಪರೆಯನ್ನು ಅವಲೋಕನ ಮಾಡಿದಾಗ ಭಾರತದ ಧಾರ್ಮಿಕ ಇತಿಹಾಸದಲ್ಲಿ 12ನೇ ಶತಮಾನದ ಚಿಂತನೆಗಳು, ವಚನಗಳು ಅತ್ಯಂತ ಪಾವನ ಹಾಗೂ ಪವಿತ್ರವಾದದ್ದು ಎಂದು ಸಂಸ್ಕೃತಿ ಚಿಂತಕ ಹಾಗೂ ವಿಶ್ರಾಂತ ಮುಖ್ಯ ಅಭಿಯಂತರ ಶಂಕರ ದೇವನೂರು ಹೇಳಿದರು.
ನಗರದ ಸರಸ್ವತಿಪುರಂನ ಮಹಿಳಾ ಜೆಎಸ್‌ಎಸ್ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪ್ರಸಾರಾಂಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈಚಾರಿಕ ಹಾಗೂ ವೈಜ್ಞಾನಿಕವಾಗಿ ಮಹತ್ವದ ಕಾಲಘಟ್ಟ. ಕಳೆದ ಯಾವುದೇ ಒಂದು ಶತಮಾನವನ್ನು ಸ್ಮರಿಸಿಕೊಂಡು ರೋಮಾಂಚನವಾಗುವುದಾದರೆ ಹಾಗೂ ಆಶ್ಚರ್ಯ ಪಡುವುದಾದರೆ ಅದು 12ನೇ ಶತಮಾನ ಎಂದರು.
ಗಿರೀಶ್ ಕಾರ್ನಾಡ್ ಅವರು ತಮ್ಮ ತಲೆದಂಡ ಕೃತಿಯಲ್ಲಿ ನನ್ನ ಮನಸ್ಸು ತಟ್ಟನೆ 12ನೇ ಶತಮಾನದ ಚಿಂತನೆಗಳಿಗೆ ಗಾವಿಸುತ್ತದೆ ಎಂದಿದ್ದಾರೆ. 12ನೇ ಶತಮಾನ ಕಾಲದ ಮನಸ್ಸುಗಳು ಕಾರುಣ್ಯವಾಗಿದ್ದವು, ಜೀವಪರವಾಗಿದ್ದವು. ಇಂದು ವಿಜ್ಞಾನ, ತಂತ್ರಜ್ಞಾನ ಮುಂದುವರಿದಿದೆ. ಆದರೆ ನಮ್ಮ ಮನಸ್ಸು ಜಟಿಲವಾಗಿದೆ ಎಂದು ತಿಳಿಸಿದರು.
ಮಾನವ ಶಕ್ತಿಯ ಪೂರ್ಣವಿಕಾಸವಾಗುವ ಮಾರ್ಗವನ್ನು ಕೊಟ್ಟವರೇ ಬಸವಣ್ಣ. ಮಾತಿಲ್ಲದವರಿಗೆ ಮಾತಾಗಿ, ಧ್ವನಿಯಿಲ್ಲದವರಿಗೆ ಧ್ವನಿಯಾದ್ದದ್ದು 12ನೇ ಶತಮಾನ ಎಂದರು.
ಬಸವಣ್ಣನವರು ಕಾಯದ ಮೂಲಕ ನೊಂದವರಿಗೆ ಸ್ವಾಭಿಮಾನಿಯಾಗಿ ಬದುಕುವ ಕಲೆಯನ್ನು ಕಲಿಸಿಕೊಟ್ಟರು ಎಂದು ಹೇಳಿದರು.
ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಮಾತನಾಡಿ, ಪ್ರಸಾರಾಂಗಕ್ಕೆ 92 ವರ್ಷ ಪೂರ್ಣಗೊಂಡಿದೆ. 110 ವರ್ಷ ಪರಂಪರೆಯಿರುವ ಮೈಸೂರು ವಿಶ್ವವಿದ್ಯಾಲಯದೊಳಗೆ ಇರವ ಪ್ರಸಾರಾಂಗ ಕುವೆಂಪು ಅವರ ಕನಸಿನ ಸಂಸ್ಥೆ. ಪ್ರಸಾರಾಂಗ ಎಂಬ ಹೆಸರನ್ನೂ ಕೂಡ ಕುವೆಂಪು ಅವರೇ ಕೊಟ್ಟಿದ್ದು ಎಂದು ತಿಳಿಸಿದರು.
ಪ್ರಸಾರಾಂಗದೊಳಗೆ 400ಕ್ಕೂ ಹೆಚ್ಚು ಉಪನ್ಯಾಸಗಳನ್ನು ಮಾಡುವುದರ ಜತೆಗೆ 400ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಮಾಡಲಾಗಿದೆ. ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿವಿಯವರೆಗೂ ನಮ್ಮ ಮೈಸೂರು ವಿವಿಯ ಪ್ರಚಾರನೋಪ್ಯಾಸವನ್ನು ಕೆಳಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ನಮ್ಮ ಪ್ರಸಾರಾಂಗದಲ್ಲಿ ಇಂದಿಗೂ 50 ಪೈಸೆಯಿಂದ 4500 ರೂ. ಬೆಲೆಯ ಪುಸ್ತಕಗಳು ಓದುಗರಿಗೆ ಸಿಗುತ್ತದೆ. ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತಿ ಹೊಂದಿದ ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಕುಳಿತು ಕೆಲಸ ಮಾಡಿದ್ದಾರೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶ ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರಾಂಶುಪಾಲ ಡಾ.ರೆಚಣ್ಣ, ಕನ್ನಡ ವಿಭಾದ ಮುಖ್ಯಸ್ಥ ಆರ್.ಎಸ್.ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net