ಯುಪಿಎಸ್‌ಸಿ ತೇರ್ಗಡೆಯಾಗಬೇಕು ಎಂಬ ಗುರಿ ಹೊಂದಿರುವ ನಾನು ದ್ವಿತೀಯ ಪಿಯುಸಿಯಲ್ಲಿ ಶೇ.95ರಷ್ಟು ಅಂಕ ಪಡೆದು ಬಿ.ಎಸ್ಸಿ ಪದವಿ ಶಿಕ್ಷಣ ಪ್ರವೇಶಕ್ಕೆ ಪಡೆದಿದ್ದೆ. ಇದೀಗ 11 ಪದಕಗಳನ್ನು ಪಡೆದುಕೊಂಡಿದ್ದು, ಈಗಾಗಲೇ ಗುರಿಯೆಡೆಗೆ ನಡೆಯುವ ನಿಟ್ಟಿನಲ್ಲಿ ಓದಲು ಶುರು ಮಾಡಿದ್ದು, ಉನ್ನತ ಅಧಿಕಾರಿ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.