ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸೋಸಲೆ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿ, ಎಲ್ಲ ಕ್ರೀಡಾಪಟುಗಳು ಕ್ರೀಡೆಯ ಜತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ನೀಡಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.
ನಂತರ ವಕೀಲರ ಸಂಘದ ಖಜಾಂಚಿ ಸೋಸಲೆ ಮಹದೇವಸ್ವಾಮಿ ಮಾತನಾಡಿ, ಪ್ರಸ್ತುತ ಮಕ್ಕಳು ಮೊಬೈಲ್, ಟಿವಿಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು, ಕ್ರೀಡೆಗಳ ಕಡೆ ಗಮನ ಹರಿಸದೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡೆಯು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಜತೆಗೆ ಸೋಸಲೆ ಪ್ರೀಮಿಯರ್ ಲೀಗ್‌ನಂತಹ ಕ್ರೀಡಾ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹ ನೀಡಿದರು.
ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅರ್ಜುನ ವಾರಿಯರ್ಸ್ ತಂಡದ ಗಂಗಾಧರ್ ಸ್ವಾಮಿ(ಗುಂಡ) ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಈ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸಮನ್ ಹಾಗೂ ಬೆಸ್ಟ್ ಬೌಲರ್ ಆಗಿ ದೊಡ್ಡೇಬಾಗಿಲು ತಂಡದ ಹರ್ಷದ್ ಹಾಗೂ ತೇಜುಮೂರ್ತಿ ಪ್ರಶಸ್ತಿ ಪಡೆದರು.
ಈ ಸಂದರ್ಭದಲ್ಲಿ ಈ ಪಂದ್ಯಾವಳಿಯ ಪ್ರೋತ್ಸಾಹಕರಾದ ಯುವ ಕಾಂಗ್ರೆಸ್ ಮುಖಂಡರಾದ ರಾಜು(ಬೆಳ್ಳಿ), ದೀಪ ಬ್ಯಾಂಗಲ್ಸ್ ಸ್ಟೋರ್ ಮಾಲೀಕ ಮಧು, ಸೋಸಲೆ ಗ್ರಾಮ ಯುವ ಮುಖಂಡರಾದ ಗುರುರಾಜ್, ಶ್ರೀಕಾಂತ್, ಎಸ್.ಪಿ.ಮಹದೇವಸ್ವಾಮಿ ಇತರರು ಇದ್ದರು.