ರೈತರ ಹಿತ ಕಾಯಲು ಬದ್ಧರಾಗಿ

ಪಿರಿಯಾಪಟ್ಟಣ ತಾಲೂಕು ಕೊತ್ವವಳ್ಳಿಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಅಭಿನಂದಿಸಿದರು. ಕೆಂಚೇಗೌಡ, ಮಹದೇವ್, ಕುಮಾರೇಗೌಡ, ಜಗದೀಶ್, ಸುಧಾ, ಕುಸುಮಾ, ಹರೀಶ್ ಕುಮಾರ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು. ಕೆ.ಹೊಲದಪ್ಪ, ರಾಜೇಗೌಡ, ಪ್ರೀತಿ ಮಲ್ಲಿಕಾ, ಬಾಳೆಮಂಡಿ ಕೀರ್ತಿ, ಪ್ರಶಾಂತ್, ಕುಳ್ಳೇಗೌಡ, ಪುಟ್ಟಮಾದೇಗೌಡ, ತಮ್ಮೇಗೌಡ ಇತರರು ಇದ್ದರು.

Published on
ರಾವಂದೂರು: ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ರೈತರ ಹಿತ ಕಾಪಾಡಲು ಬದ್ಧರಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕು ಕೊತ್ವವಳ್ಳಿ ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಗೆದ್ದ ನಂತರ ಅಭ್ಯರ್ಥಿಗಳು ರಾಜಕೀಯ ಬೆರೆಸದೆ ರೈತರ ಹಿತವನ್ನು ಕಾಪಾಡಲು ಮುಂದಾಗಬೇಕು. ಜತೆಗೆ ಸರ್ಕಾರದಿಂದ ಬರುವ ಯೋಜನೆಗಳ ಸೌಲಭ್ಯವನ್ನು ನಿಷ್ಪಕ್ಷಪಾತವಾಗಿ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವ ಮೂಲಕ ರೈತರು ಸಹಕಾರ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಡೇರಿ ನೂತನ ನಿರ್ದೇಶಕರಾದ ಜಯರಾಮಗೌಡ, ಕೆಂಚೇಗೌಡ, ಮಹದೇವ್, ಕುಮಾರೇಗೌಡ, ಜಗದೀಶ್, ಸುಧಾ, ಕುಸುಮಾ, ಹರೀಶ್ ಕುಮಾರ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ, ಗ್ರಾಪಂ ಅಧ್ಯಕ್ಷ ರಾಜೇಗೌಡ, ಉಪಾಧ್ಯಕ್ಷ ಪ್ರೀತಿ ಮಲ್ಲಿಕಾ, ಕಿತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಾಳೆಮಂಡಿ ಕೀರ್ತಿ, ಗ್ರಾಪಂ ಸದಸ್ಯರಾದ ಪ್ರಶಾಂತ್, ಕುಳ್ಳೇಗೌಡ, ಮುಖಂಡರಾದ ಪುಟ್ಟಮಾದೇಗೌಡ, ತಮ್ಮೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net