ತಿ.ನರಸೀಪುರ: ರಾಜಕೀಯ ಅಧಿಕಾರ ಕೊಟ್ಟಿರುವ ಜನರ ಋಣವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಎರಡೂವರೆ ವರ್ಷಗಳ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ತಂದು ತಿ.ನರಸೀಪುರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ಸಂಸದ ಸುನೀಲ್ ಬೋಸ್ ಭರವಸೆ ನೀಡಿದರು.
ತಾಲೂಕಿನ ಬಿ.ಬೆಟ್ಟಹಳ್ಳಿ ಗ್ರಾಮದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆಯ ಅನುದಾನ 7 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ, 30 ಲಕ್ಷ ರೂ. ವೆಚ್ಚದ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ ವಿಶೇಷ ಘಟಕ ಅನುದಾನ 15 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಅವರು, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನಿರಂತರವಾಗಿ ಬೆಂಬಲಿಸಿ ಕೈ ಹಿಡಿಯುವುದರ ಜತೆಗೆ ನನ್ನನ್ನೂ ಸಂಸದರನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಜನರ ಋಣವನ್ನು ಅಭಿವೃದ್ಧಿ ಕೆಲಸಗಳಿಂದ ತೀರಿಸುತ್ತಿದ್ದೇವೆ ಎಂದರು.
ಬನ್ನೂರು ಪಟ್ಟಣದ ಸಂತೆಮಾಳದಲ್ಲಿರುವ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರದ ವಿವೇಕ ಶಾಲೆ ಯೋಜನೆಯಡಿ 1,47,28,000 ರೂ. ಅನುದಾನದಲ್ಲಿ 9 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ಅತ್ತಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನ, 15 ಲಕ್ಷ ರೂ. ಎಸ್ಸಿಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ, ಬೇವಿನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ, 15 ಲಕ್ಷ ರೂ. ಎಸ್ಸಿಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ, ಕೇತುಪುರ ಗ್ರಾಮದಲ್ಲಿ ಎಸ್ಸಿಪಿ ಅನುದಾನ 25 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ, ಉಕ್ಕಲಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ, ನರಸೀಪುರ ಪಟ್ಟಣದ ಶ್ರೀ ಉಜ್ಜ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ಕಬಿನಿ ನದಿ ದಡದಲ್ಲಿ ಜಿಪಂ ಅನುದಾನ 14 ಲಕ್ಷ ರೂ. ವೆಚ್ಚದಲ್ಲಿ ಪುರುಷರು ಮತ್ತು ಮಹಿಳೆಯರ ವಸ್ತ್ರ ಬದಲಿಸುವ ಕುಟೀರಗಳ ನಿರ್ಮಾಣ ಹಾಗೂ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ವಿವೇಕ ಶಾಲೆ ಯೋಜನೆಯಡಿ 98 ಲಕ್ಷ ರೂ. ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಗ್ರಾಪಂ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೃಂದಾ ಕೃಷ್ಣೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಮೈಮುಲ್ ನಿರ್ದೇಶಕ ಆರ್.ಚಲುವರಾಜು, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ವಜ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್, ಪ್ರಾಂಶುಪಾಲ ಎಂ.ಬಿ.ನಂಜುಂಡಸ್ವಾಮಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಸಿ.ನಂದೀಶ್, ಜಿಪಂ ತಾಂತ್ರಿಕ ಉಪ ವಿಭಾಗದ ಎಇಇ ಪಿ.ಎನ್.ಚರಿತಾ, ಜೆಇ ಶಿವಸ್ವಾಮಿ, ಎಇಇ ಸತೀಶ್, ಹಿರಿಯ ಅಭಿಯಂತರರಾದ ಆರ್.ಪೂರ್ಣಿಮಾ, ಬಿರೇಶ್, ಮೋಹನ್, ಸಂಸದರ ಆಪ್ತ ಸಹಾಯಕ ಬಿ.ಬಸವರಾಜು, ಮುಖಂಡರಾದ ಮರಿಗೌಡ, ಸಿ.ಎಂ.ನಾಗಭೂಷಣ್, ಯಾಚೇನಹಳ್ಳಿ ರಾಘವೇಂದ್ರ, ಪುಟ್ಟರಾಜು, ದೊಳ್ಳಯ್ಯ, ಕೃಷ್ಣೇಗೌಡ, ಪಟೇಲ್ ನಟರಾಜು, ಕನ್ನಾಯಕನಹಳ್ಳಿ ಕುಮಾರ್, ಎಂ.ಡಿ.ರಾಮು, ಕೆಂಪರಾಜು, ಯೋಗೇಶ್, ಮಹೇಂದ್ರ ಕುಮಾರ್, ರಾಜೇಶ್, ನಾರಾಯಣಿ, ರತ್ನಮ್ಮ ಕೃಷ್ಣಮೂರ್ತಿ, ಸಂತೋಷ್, ಎಂ.ಮಲ್ಲಿಕಾರ್ಜುನಸ್ವಾಮಿ, ಕುಕ್ಕೂರು ಗಣೇಶ, ರಾಮಲಿಂಗಯ್ಯ, ವಕೀಲ ಶಿವಮೂರ್ತಿ, ಪುರಸಭೆ ಸದಸ್ಯರಾದ ಶಿವಣ್ಣ, ಶಿವು, ಮಹೇಶ, ಕಾರ್ಮಿಕ ಮುಖಂಡ ಶಿವಸಿದ್ದು, ಗುತ್ತಿಗೆದಾರರಾದ ಎ.ಎನ್.ಸ್ವಾಮಿ, ಕೆ.ಎಂ.ಮಧುಕುಮಾರ್ ಇತರರು ಇದ್ದರು.