ಬೈಲುಕುಪ್ಪೆ: ಪಿರಿಯಾಪಟ್ಟಣದ ತಾಲೂಕು ಅಲನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ 12 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.
ಆ ಮೂಲಕ ಈ ಹಿಂದೆ ಇದ್ದ ಅಧಿಕಾರ ಚುಕ್ಕಾಣಿಯನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಕುಳ್ಳೇಗೌಡ, ರಾಜೇಗೌಡ, ಕುಮಾರ್, ರಾಜನಾಯ್ಕ, ನಾಗೇಶ್, ರಾಘವೇಂದ್ರ, ಗಣೇಶ್, ಬಿ.ಶೇಖರ್, ಲೋಕೇಶ್, ಬಿ.ಕೃಷ್ಣ, ಗಾಯತ್ರಿ, ಶಾರದಮ್ಮ ಜಯಗಳಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಹಿತೇಂದ್ರ ಹಾಗೂ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ಗೌಡ ಕಾರ್ಯ ನಿರ್ವಹಿಸಿದರು. ವಿಜೇತರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ ಗೆಲುವಿನ ಕುರಿತು ಮಾತನಾಡಿದರು. ಗ್ರಾಪಂ ಸದಸ್ಯರಾದ ನಾಗರಾಜ್, ಸ್ವಾಮಿನಾಯಕ, ಗಣೇಶ್, ಜವರೇಗೌಡ, ಡೇರಿ ಮಾಜಿ ಅಧ್ಯಕ್ಷ ದೇವರಾಜ್, ಮುಖಂಡರಾದ ನಾಗಣ್ಣ, ಗುರುವಪ್ಪ, ಬಸವರಾಜ್, ರಾಜಪ್ಪ, ಸ್ವಾಮಿನಾಯಕ, ರಾಜಯ್ಯ, ಪೂಜಾರಿ ಬಸಪ್ಪ, ಕೆ.ರಾಜು, ಟೇಲರ್ ಮಲ್ಲೇಶ್, ಮೊಗಣ್ಣ ನಾಯಕ, ಅಣ್ಣಯ್ಯ ನಾಯಕ, ಶಿವಯ್ಯ ಇತರರು ಇದ್ದರು.