ಆಹಾರವೆಂದು ಸಿಡಿಮದ್ದು ತಿಂದ ಹಸುವಿನ ಬಾಯಿ ಛಿದ್ರ: ನಂಜನಗೂಡಿನಲ್ಲಿ ಅಮಾನವೀಯ ಘಟನೆ

cOW
Published on

ಮೈಸೂರು: ಕಾಡು ಪ್ರಾಣಿಗಳ ಬೇಟೆಗೆ ಇರಿಸಲಾಗಿದ್ದ ಸಿಡಿಮದ್ದು ತಿಂದ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ. ನಾಟಿ ಸಿಡಿಮದ್ದಿನ ಸ್ಫೋಟದ ರಭಸಕ್ಕೆ ಜಾನುವಾರುವಿನ ಮುಖ ಛಿದ್ರವಾಗಿದೆ.

ಈ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವೆಂಕಟರಾಮು ಎಂಬುವರಿಗೆ ಸೇರಿದ ಜಾನುವಾರು ಸ್ಥಿತಿ ಇದೀಗ ಚಿಂತಾಜನಕವಾಗಿದೆ.

ಸ್ಥಳ ಪರಿಶೀಲನೆ ಮಾಡಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಸಿಡಿಮದ್ದು ತಯಾರಿಸಿದ ಆರೋಪಿ ಸೂರಳ್ಳಿ ಗ್ರಾಮದ ಚಿಕ್ಕ ನಾಯಕನನ್ನು ಬಂಧಿಸಿದ್ದಾರೆ.

ಅಂಬಳೆ ಗ್ರಾಮದ ಹೊರವಲಯದ ಕೆರೆಯ ಸಮೀಪ ಕಾಡು ಹಂದಿಗಳನ್ನು ಬೇಟೆಯಾಡಲು ಆರೋಪಿ ಚಿಕ್ಕನಾಯಕ ಸಿಡಿಮದ್ದು ತಯಾರಿಸಿದ್ದ. ಕೆರೆಗೆ ನೀರು ಕುಡಿಯಲು ತೆರಳಿದ ಹಸು ಸಿಡಿಮದ್ದು ತಿಂದಿದೆ. ಬಾಯಲ್ಲೇ ಸ್ಫೋಟಗೊಂಡಿದ್ದರಿಂದ ಬಾಯಿ ಛಿದ್ರವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net