

ಬೆಂಗಳೂರು: ಒಮ್ಮೊಮ್ಮೆ ಕಣ್ಣು ಎಷ್ಟು ನಮ್ಮನ್ನು ಮೋಸ ಮಾಡುತ್ತದೆ ಎಂದರೆ, ಸಮೀಪದಲ್ಲಿಯೇ ಇರುವ ವಸ್ತು ಎಷ್ಟೋ ಬಾರಿ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ. ಅಂಥದ್ದೇ ಒಂದು ಚಾಲೆಂಜ್ ಇಲ್ಲಿದೆ.
ಈ ಚಿತ್ರದಲ್ಲಿ ಒಬ್ಬಳು ಹುಡುಗಿ ಅವಿತು ಕುಳಿತಿದ್ದಾಳೆ. ಸಡನ್ ಆಗಿ ನೋಡಿದರೆ ಈ ಸುಂದರಿ ಅಷ್ಟು ಸುಲಭದಲ್ಲಿ ಕಾಣಿಸುವುದಿಲ್ಲ. ಆದ್ದರಿಂದ ಒಮ್ಮೆ ಝೂಮ್ ಮಾಡಿ ನೋಡಿ. ಇದರೊಂದು ರೀತಿಯಲ್ಲಿ ಚಾಲೆಂಜ್ ಜತೆ ಮನರಂಜನೆ.
ಸೂಕ್ಷ್ಮವಾಗಿ ಒಂದು ಕಡೆಯಿಂದ ನೋಡುತ್ತಾ ಬನ್ನಿ. ಕ್ರಮೇಣ ನಿಮಗೆ ಕಂಡೇ ಕಾಣಿಸುತ್ತದೆ. ಆದರೆ ಇದಕ್ಕಾಗಿ ಸ್ವಲ್ಪ ಪೇಷನ್ಸ್ ಬೇಕಷ್ಟೇ. ಉತ್ತರ ಗೊತ್ತಾದ ಮೇಲೆ ಅಯ್ಯೋ ಇಲ್ಲೇ ಇದ್ದಾಳಲ್ಲಪ್ಪ ಎನ್ನಿಸುತ್ತದೆ. ಇನ್ನೇಕೆ ತಡ ಮತ್ತೊಮ್ಮೆ, ಇನ್ನೊಮ್ಮೆ ನೋಡಿ... ಝೂಮ್ ಮಾಡಿ ಮಾಡಿ ನೋಡಿ...
ನಿಮಗೆ ಎಷ್ಟು ಹುಡುಕಿದರೂ ಈ ಸುಂದರಿ ಕಾಣಿಸಲಿಲ್ಲವೇ? ಅಥವಾ ಇದೆಲ್ಲಾ ಸುಳ್ಳು ಇಲ್ಲಿ ಹುಡುಗಿ ಇಲ್ಲವೇ ಇಲ್ಲ ಎಂದುಕೊಂಡ್ರಾ? ಹಾಗಿದ್ದರೆ ನಿಮಗಿಲ್ಲಿ ಚಿಕ್ಕ ಟಿಪ್ಸ್ ಕೊಡುತ್ತಿದ್ದೇವೆ ನೋಡಿ.
ಫೋಟೋವನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದರೆ ಗೊತ್ತಾಗುತ್ತೆ. ಚಿತ್ರದಲ್ಲಿ ಗೇಟ್, ಗೋಡೆ, ಗೋಡೆ ಹಿಂಬದಿಗೆ ಗಿಡಮರಗಳು, ಕಲ್ಲು ಹೀಗೆ ಅನೇಕ ವಸ್ತುಗಳು ಕಂಡುಬರುತ್ತಿವೆ. ಆದರೆ ಸ್ವಲ್ಪ ಸಂಯಮದಿಂದ ಮತ್ತು ಸೂಕ್ಷ್ಮವಾಗಿ ಗಮನಿಸಿದಾಗ ಮರದ ಬುಡಕ್ಕೆ ಒಬ್ಬಳು ಹುಡುಗಿ ಮರದ ಕಾಂಡದ ಬಣ್ಣದ ಹಾಗೆಯೇ ವಸ್ತ್ರಗಳನ್ನು ಧರಿಸಿ ಕುಳಿತಿರುವುದು ಕಂಡುಬರುತ್ತದೆ. ಈಗ ಹೇಳಿ ಹುಡುಗಿ ಕಾಣಿಸಿದ್ಲಾ?
ಅಯ್ಯಯ್ಯೋ... ಹೌದಲ್ವಾ? ನಮಗೆ ಕಾಣಿಸಲೇ ಇಲ್ಲ ಎಂದುಕೊಂಡ್ರಾ? ಈಗ ಮತ್ತೊಮ್ಮೆ ನೋಡಿ, ಚೆಲುವೆ ನಿಮಗೆ ಕಾಣಿಸುತ್ತಾಳೆ.
ಚೆಲುವೆಯ ಬಟ್ಟೆಯ ಬಣ್ಣವು ಮತ್ತು ಸುತ್ತಮುತ್ತಲಿನ ಪರಿಸರದ ಬಣ್ಣವು ಒಂದೇ ರೀತಿಯಾಗಿ ಮ್ಯಾಚ್ ಆಗಿರುವುದರಿಂದಲೇ ಇದು ಪಜಲ್ ಬಿಡಿಸುವವರಿಗೆ ಒಂದು ಚಾಲೆಂಜ್ ಆಗಿದೆ.
ನಿಮ್ಮ ಸ್ನೇಹಿತರ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡಲು ನೀವೂ ಇದನ್ನು ಶೇರ್ ಮಾಡಿ ಎನ್ಜಾಯ್ ಮಾಡಿ...