More

    ಚಳಿಗಾಲದಲ್ಲಿ ಕರೊನಾ ಹೆಚ್ಚಳ: ದಿನವೊಂದಕ್ಕೆ 15 ಸಾವಿರ ಪ್ರಕರಣ, ಎನ್​ಸಿಡಿಸಿ ಎಚ್ಚರಿಕೆ!

    ನವದೆಹಲಿ: ಮುಂಬರುವ ದಿನಗಳಲ್ಲಿ ಚಳಿಗಾಲ ಆರಂಭವಾಗಲಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ಹೀಗಾಗಿ ಮಹಾಮಾರಿ ಕರೊನಾ ಕುರಿತು ಭಾರಿ ಎಚ್ಚರಿಕೆ ವಹಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ಎಚ್ಚರಿಸಿದೆ.

    ಚಳಿಗಾಲದಲ್ಲಿ ಕರೊನಾ ಪ್ರಮಾಣ ಹೆಚ್ಚಾಗಲಿದೆ ಎಂದಿರುವ ಎನ್​ಸಿಡಿಸಿ, ದೆಹಲಿಯಲ್ಲೇ ದಿನವೊಂದಕ್ಕೆ 15 ಸಾವಿರ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದಿದೆ. ಹೀಗಾಗಿ ಚಳಿಗಾಲವನ್ನು ಗಂಭೀರವಾಗಿ ಪರಿಗಣಿಸಿ ದೆಹಲಿ ಸರ್ಕಾರ ಮೊದಲೇ ಸಿದ್ಧವಾಗುವುದು ಒಳಿತು ಎಂದು ಎನ್​ಸಿಡಿಸಿ ಸಲಹೆ ನೀಡಿದೆ.

    ಇದನ್ನೂ ಓದಿ: ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಪದೇಪದೆ ಈ ಗುಲಾಬಿಯೇ ಅಧ್ಯಕ್ಷೆ!

    ದೆಹಲಿಯಲ್ಲಿ ಕರೊನಾದಿಂದ ಮೃತಪಟ್ಟವರ ಪ್ರಮಾಣ 1.9 ರಷ್ಟಿದ್ದು, ಶೇ. 1.5 ಹೊಂದಿರುವ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. ಹೀಗಾಗಿ ಸಾಧ್ಯವಾದಷ್ಟು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಮುಖ್ಯ ಉದ್ದೇಶಗಳಲ್ಲಿ ಒಂದಾಗಿರಬೇಕೆಂದು ಹೇಳಿದೆ.

    ಕಳೆದ ಮಂಗಳವಾರ ಮಾತನಾಡಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್​, ಎರಡನೇ ಹಂತದ ಕರೊನಾ ವೈರಸ್​ ರಾಷ್ಟ್ರ ರಾಜಧಾನಿಯಲ್ಲಿ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಪರಿಸ್ಥಿತಿಯನ್ನು ಬಹಳ ನಿಯಂತ್ರಿಸಲಾಗಿದೆ. ಸೋಂಕನ್ನು ಪತ್ತೆಹಚ್ಚಲು ಪರೀಕ್ಷೆಗಳನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಚಿತ್ರದಲ್ಲಿ ಅಡಗಿರೋ ಸುಂದರಿಯ ಗುರುತಿಸುವಿರಾ?ಫೋಟೋ ಕ್ಲಿಕ್​ ಮಾಡಿ… ಝೂಮ್​ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts