ಅಪಘಾತದಲ್ಲಿ ಮೃತಪಟ್ಟ ಮೈಸೂರು ಮೂಲದ ಇಂಜಿನಿಯರ್​ರಿಂದ ನಾಲ್ವರಿಗೆ ಜೀವದಾನ..!

Engineer
Published on

ಮೈಸೂರು: ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್​ ನಾಲ್ವರಿಗೆ ಜೀವದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಚಂದನ್ ಮಲ್ಲಪ್ಪ(28) ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್. ಭಾನುವಾರ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಚಂದನ್‌ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಕೃತಕ ಉಸಿರಾಟದ ಬೆಂಬಲದೊಂದಿಗೆ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಚಂದನ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆಗೆ ದೇಹ ಸ್ಪಂದಿಸುವುದಿಲ್ಲ ಎಂಬುದು ವೈದ್ಯರಿಗೆ ಮೊದಲೇ ದೃಢಪಟ್ಟಿತ್ತು. ಮೆದುಳು ನಿಶ್ಕ್ರಿಯವಾಗಿದ್ದರಿಂದ ಸಂಬಂಧಿಕರಿಗೆ ವಿಷಯ ತಿಳಿಸಲಾಗಿತ್ತು.

ಬಳಿಕ ಚಂದನ್​ ಪಾಲಕರು ಹೃದಯ ನಾಳ, ಎರಡು ಕಿಡ್ನಿ ಹಾಗೂ ಒಂದು ಲಿವರ್ ದಾನ ಮಾಡಿದ್ದಾರೆ. ಒಂದು ಕಿಡ್ನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮತ್ತು ಹಾರ್ಟ್ಸ್ ವಾಲ್ಮ್ಸ್ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾನ ಮಾಡಲಾಗಿದೆ. ಈ ಮೂಲಕ ಚಂದನ್​ ಅವರು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net