ಮೈಸೂರು ವಿವಿ ಪ್ರಾಧ್ಯಾಪಕರ ಕಾಮಕಾಂಡ; ವಿದ್ಯಾರ್ಥಿನಿಯ ಜತೆಗಿದ್ದಾಗ ಪತ್ನಿ ಕೈಗೇ ಸಿಕ್ಕಿಹಾಕಿಕೊಂಡ ಪ್ರೊಫೆಸರ್​

Untitled-1
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕಾಮಕಾಂಡದ ಕಳಂಕಕ್ಕೆ ಒಳಗಾಗಿದ್ದು, ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದ ಪ್ರೊಫೆಸರ್, ಪತ್ನಿಯ ಕೈಗೆ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಪ್ರಕರಣವೀಗ ಪೊಲೀಸ್​ ಠಾಣೆಯ ಮೆಟ್ಟಿಲನ್ನೂ ಏರಿದೆ.

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ಅವರೇ ಆರೋಪಿ. ಇವರು ತಮ್ಮಿಂದ ಮಾರ್ಗದರ್ಶನ ಪಡೆಯುತ್ತಿದ್ದ ಪಿಎಚ್​ಡಿ ವಿದ್ಯಾರ್ಥಿನಿಯನ್ನೇ ಮನೆಗೆ ಕರೆಸಿಕೊಂಡಿದ್ದಾರೆ. ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಯತ್ನವಾಗಿದ್ದು, ವಿದ್ಯಾರ್ಥಿನಿ ತಪ್ಪಿಸಿಕೊಳ್ಳುವ ಸಲುವಾಗಿ ಕೂಗಾಟ-ಚೀರಾಟ ನಡೆಸಿದ್ದಳು.

ಅದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಪತ್ನಿ ಲೋಲಾಕ್ಷಿ ಮನೆಗೆ ಬಂದಿದ್ದು, ರಾಮಚಂದ್ರ ರೆಡ್ ಹ್ಯಾಂಡೆಡ್​ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಜಯಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆ ಹಾಗೂ ಪತಿಯನ್ನು ಲೋಲಾಕ್ಷಿ ಠಾಣೆಗೆ ಕರೆದುಕೊಂಡು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಪತ್ನಿ ಲೋಲಾಕ್ಷಿ ಕೂಡ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net