More

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ಬೆಂಗಳೂರು: ಕರೊನಾ ಸೋಂಕು ಬಂದಾಗಿನಿಂದ ಅದರ ಜತೆ ಹೆಚ್ಚಾಗಿ ಕೇಳಿಬರುತ್ತಿದ್ದ ಮತ್ತೊಂದು ಪದ ಎಂದರೆ ಕೊಮಾರ್ಬಿಡಿಟೀಸ್​. ಅಂದರೆ ಕೋವಿಡ್​-19 ಪಾಸಿಟಿವ್ ಆಗಿದ್ದೂ ಕೊಮಾರ್ಬಿಡಿಟೀಸ್​ ಇದ್ದರೆ ಅಂಥವರು ಹೆಚ್ಚಿನ ತೊಂದರೆ ಅಥವಾ ಪ್ರಾಣಾಪಾಯಕ್ಕೆ ಒಳಗಾಗುತ್ತಾರೆ ಎಂದು ಪರಿಣತರು ಕಿವಿಮಾತು ಹೇಳುತ್ತಲೇ ಬಂದಿದ್ದಾರೆ. ಇದೀಗ ಕೊಮಾರ್ಬಿಡಿಟೀಸ್​ ಇರುವವರು ತುರ್ತಾಗಿ ಲಸಿಕೆ ಪಡೆಯುವುದು ಅನಿವಾರ್ಯ ಎನ್ನುವ ಸಲಹೆಗಳು ಕೇಳಿಬರುತ್ತಿವೆ. ಆ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯೂ ಜಾಗೃತಿ ಮೂಡಿಸಲು ಮುಂದಾಗಿದೆ.

    ಹಾಗಾದರೆ ಕೊಮಾರ್ಬಿಡಿಟೀಸ್ ಎಂದರೇನು? ಒಬ್ಬ ರೋಗಿಯಲ್ಲಿ ನಿಗದಿತ ರೋಗಗಳ ಪೈಕಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರೋಗಗಳು ಇದ್ದಲ್ಲಿ ಅದನ್ನು ಕೊಮಾರ್ಬಿಡಿಟೀಸ್​ ಎನ್ನುತ್ತಾರೆ. ಹೃದ್ರೋಗ, ಮೂತ್ರಪಿಂಡದ ಸಮಸ್ಯೆ, ಕ್ಯಾನ್ಸರ್, ಡಯಾಬಿಟಿಸ್ ಟೈಪ್​ 1 ಮತ್ತು ಟೈಪ್ 2, ಅಧಿಕ ರಕ್ತದೊತ್ತಡ, ಹೈಪರ್ ಅಥವಾ ಹೈಪೋಥೈರಾಯ್ಡಿಸಂ, ಅಸ್ತಮಾ, ಸಿಸ್ಟಿಕ್​ ಫೈಬ್ರೋಸಿಸ್, ಡಿಮೆನ್ಷಿಯಾ ರೋಗಗಳನ್ನು ಕೊಮಾರ್ಬಿಡಿಟೀಸ್​ ವರ್ಗದಲ್ಲಿ ಬರುತ್ತವೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಈ ಮೇಲಿನ ರೋಗಗಳಲ್ಲಿ ಯಾವುದಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ರೋಗಗಳಿಂದ ಬಳಲುತ್ತಿರುವವರು ಕೋವಿಡ್​-19 ಪಾಸಿಟಿವ್ ಆದಲ್ಲಿ ಅಂಥವರು ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಪ್ರಾಣಾಪಾಯ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಹೀಗಾಗಿ ಮೇಲಿನ ರೋಗಗಳಲ್ಲಿ ಯಾವುದಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಾಯಿಲೆಗಳಿಂದ ಬಳಲುತ್ತಿರುವವರು ಬೇಗ ಲಸಿಕೆ ಪಡೆಯುವುದು ಒಳ್ಳೆಯದು ಎಂದು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ.

    ಬಾಲಕಿಯರಿಬ್ಬರ ಮೇಲೆ ಗ್ಯಾಂಗ್​ರೇಪ್​: ರಾತ್ರಿ ಇಡೀ ಮಕ್ಕಳು ಹೊರಗಿದ್ದಾಗ ಮನೆಯವರು ಯಾಕೆ ಸುಮ್ಮನಿದ್ದರು ಎಂದ ಸಿಎಂ!

    ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

    ಮೊದಲು ನೀವು ಮಠಗಳಿಗೆ ಬರೋದನ್ನು ಬಿಡಿ: ಯತ್ನಾಳ್ ವಿರುದ್ಧ ಸ್ವಾಮೀಜಿ ಆಕ್ರೋಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts