ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

ಶಿವಮೊಗ್ಗ: ಆನ್​​ಲೈನ್​ ಮೂಲಕ ಗೋಣಿ ಚೀಲ‌ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಶಿಕಾರಿಪುರದ ಶಿಕ್ಷಕಿಯೊಬ್ಬರು ಹೀಗೆ ಮೋಸ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಖಾಲಿ ಗೋಣಿಚೀಲ ಖರೀದಿಗಾಗಿ ಗೂಗಲ್​ನಲ್ಲಿ ಹುಡುಕಾಟ ‌ನಡೆಸಿದ ಈ ಶಿಕ್ಷಕಿಗೆ ಆನ್​ಲೈನ್​ ಟ್ರೇಡಿಂಗ್ ವೆಬ್​ಸೈಟ್​ ಸಿಕ್ಕಿದೆ. ಇವರು ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏಪ್ರಿಲ್​ 11ರಂದು ಆ ಇ-ಮೇಲ್​ಗೆ ಪ್ರತಿಕ್ರಿಯೆ ಬಂದಿತ್ತು. ಇ ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ. … Continue reading ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!