ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ

Sex Maffia
Published on

ದಾವಣಗೆರೆ: ಇತ್ತೀಚಿಗೆ ಮೃತಪಟ್ಟಿದ್ದ 58 ವರ್ಷದ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನೆರವೇರಿದ್ದು, ಪುಣ್ಯತಿಥಿಯೂ ಮುಗಿದಿದೆ. ಇದೀಗ ಆ ಮಹಿಳೆಯ ಸಾವು ಸಹಜವಲ್ಲ, ಅದೊಂದು ಕೊಲೆ ಎಂಬ ರಹಸ್ಯ ಬಯಲಾಗಿದ್ದು, ಮೃತಳ ಸೊಸೆ ಮತ್ತು ಈಕೆಯ ಪ್ರಿಯಕರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೌದು, ಇಂತಹದ್ದೊಂದು ಘಟನೆ ನ್ಯಾಮತಿ ತಾಲೂಕಿನ ವಡೆಯರ ಹತ್ತೂರು ಗ್ರಾಮದಲ್ಲಿ ಸಂಭವಿಸಿದೆ. ಗಂಡನ ಮನೆಯಲ್ಲಿದ್ದುಕೊಂಡೇ ಮತ್ತೊಬ್ಬನೊಂದಿಗೆ ಸೊಸೆಗಿದ್ದ ಅಕ್ರಮ ಸಂಬಂಧವನ್ನು ಅತ್ತೆ ನೋಡಿಬಿಟ್ಟಳು. ಮಗನಿಗೆ ಈ ವಿಚಾರ ಹೇಳುತ್ತೇನೆ ಎಂದ ಅತ್ತೆಯನ್ನು ಸೊಸೆ ಪ್ರಿಯಕರನೇ ಹೆಣವಾಗಿಸಿಬಿಟ್ಟಿದ್ದ. ರತ್ನಮ್ಮ (58) ಕೊಲೆಯಾದವರು. ಮೃತಳ ಸೊಸೆ ಕವಿತಾ ಮತ್ತು ಪ್ರಿಯಕರ ಆನಂದ ಆರೋಪಿಗಳು.

ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರತ್ನಮ್ಮರ ಮಗ ಹರೀಶ್‌, ಪತ್ನಿ ಮತ್ತು ಮಗು ಜತೆ ಅಲ್ಲೇ ನೆಲೆಸಿದ್ದ. ಕರೊನಾ ಲಾಕ್‌ಡೌನ್‌ ವೇಳೆ ಪತ್ನಿ ಕವಿತಾ ಮತ್ತು ಮಗುವನ್ನು ಸ್ವಗ್ರಾಮಕ್ಕೆ ಕರೆತಂದಿದ್ದ. 3 ತಿಂಗಳಿಂದ ತಾಯಿ ಜತೆಗೆ ಹರೀಶ್​ ಕುಟುಂಬ ವಾಸವಾಗಿತ್ತು. ಈ ವೇಳೆ ಇದೇ ಗ್ರಾಮದ ಆನಂದ ಎಂಬಾತನೊಂದಿಗೆ ಕವಿತಾಗೆ ಅನೈತಿಕ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ನ.7ರ ರಾತ್ರಿ ಕವಿತಾಳನ್ನು ಹುಡುಕಿಕೊಂಡು ಆನಂದ ಮನೆಗೆ ಬಂದಿದ್ದ. ಕವಿತಾ ಮತ್ತು ಆನಂದ ಇಬ್ಬರೂ ಹೊರ ಹೋಗುವಾಗ ನಿದ್ರೆಯಿಂದ ರತ್ನಮ್ಮ ಎಚ್ಚರಗೊಂಡಿದ್ದು, ಸೊಸೆಗಿದ್ದ ಅಕ್ರಮ ಸಂಬಂಧ ಬಯಲಾಗಿದೆ. ಈ ವೇಳೆ ಕವಿತಾಳ ಗಂಡ ಮನೆಯಲ್ಲಿರಲಿಲ್ಲ. ಅಕ್ರಮ ಸಂಬಂಧ ಬಯಲಾಗುವ ಭೀತಿಯಲ್ಲಿ ರತ್ನಮ್ಮರ ಕತ್ತು ಹಿಸುಕಿ ಆನಂದ ಕೊಂದಿದ್ದ. ಸಹಜ ಸಾವು ಎಂಬಂತೆ ಸೊಸೆ ಬಿಂಬಿಸಿದ್ದಳು. ರತ್ನಮ್ಮರ ಅಂತ್ಯಕ್ರಿಯೆಯೂ ನಡೆದಿತ್ತು. ಕೆಲ ದಿನದಲ್ಲೇ ತಾಯಿ ಸಾವಿನ ಬಗ್ಗೆ ಹರೀಶ್‌ಗೆ ಅನುಮಾನ ಕಾಡಿತ್ತು.

ತಾಯಿ ಸಾವಿನ ಜಾಡು ಹಿಡಿದು ಹೊರಟ ಮಗನಿಗೆ ಹೆಂಡ್ತಿಯ ಅಕ್ರಮ ಸಂಬಂಧದ ರಹಸ್ಯ ಬಯಲಾಗಿದೆ. ನ್ಯಾಮತಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುರಿಸಿದ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್‌, ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net