ರಾಷ್ಟ್ರಮಟ್ಟದ ಕುಸ್ತಿಪಟುವನ್ನೂ ಬಿಡದ ಕರೊನಾ! ನಗರಸಭೆ ಅಧ್ಯಕ್ಷ ಕರೊನಾಗೆ ಬಲಿ

bglk
Published on

ಬಾಗಲಕೋಟೆ: ಕರೊನಾ ಸೋಂಕು ಅನೇಕರನ್ನು ಬಲಿ ತೆಗೆದುಕೊಂಡಿದೆ. ಎರಡನೇ ಅಲೆಯಲ್ಲಂತೂ ಮಧ್ಯಮ ವಯಸ್ಸಿನವರನ್ನೇ ಹೆಚ್ಚಾಗಿ ಬಲಿ ತೆಗೆದುಕೊಳ್ಳಲಾರಂಭಿಸಿದೆ. ಅದೇ ರೀತಿ ಇದೀಗ ಬಾಗಲಕೋಟೆಯ ಮುಧೋಳ ನಗರಸಭೆ ಅಧ್ಯಕ್ಷನೂ ಕೂಡ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾನೆ.

ಮುಧೋಳ ನಗರಸಭೆ ಅಧ್ಯಕ್ಷ ಸಂಜು(ಸಿದ್ದನಾಥ) ಮಾನೆ ಮೃತ ದುರ್ದೈವಿ. 32 ವರ್ಷದ ಸಂಜುಗೆ ಕೆಲ ದಿನಗಳ ಹಿಂದೆ ಸೋಂಕು ದೃಢವಾಗಿತ್ತು. ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆತ ಭಾನುವಾರದಂದು ಕೊನೆಯುಸಿರೆಳದಿದ್ದಾನೆ.

ಸಂಜು ನಗರ ಸಭೆ ಅಧ್ಯಕ್ಷ ಎನ್ನುವುದರ ಜತೆ ರಾಷ್ಟ್ರಮಟ್ಟದ ಕುಸ್ತಿಪಟು ಕೂಡ ಆಗಿದ್ದ. ಆದರೆ ಆ ಕುಸ್ತಿಪಟುವನ್ನೇ ಮಹಾಮಾರಿ ಬಲಿ ತೆಗೆದುಕೊಂಡುಬಿಟ್ಟಿದೆ. ಸದೃಢ ದೇಹ ಅಥವಾ ಆರೋಗ್ಯವಿದ್ದರೆ ಸೋಂಕು ತಗುಲುವುದಿಲ್ಲ ಎನ್ನುವುದು ಮತ್ತೊಮ್ಮೆ ಸುಳ್ಳಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net