ಡಿಗ್ರಿಗೆ ಸೇರೋದು ಬೇಡ ಎಂದು ಅಮ್ಮ ಹೇಳಿದ್ದಕ್ಕೆ ಮಗಳು ಆತ್ಮಹತ್ಯೆ!

Lady
Published on

ದಾವಣಗೆರೆ: ಪದವಿ ವ್ಯಾಸಂಗಕ್ಕಾಗಿ ಕಾಲೇಜಿಗೆ ಸೇರುವುದು ಬೇಡ ಎಂದು ಹೇಳಿದ ಒಂದೇ ಕಾರಣಕ್ಕೆ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆಯೊಂದು ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉಜ್ಜಪ್ಪ ವಡೆಯರಹಳ್ಳಿಯಲ್ಲಿ ಈ ಅವಘಡ ಸಂಭವಿಸಿದೆ.

ಉಜ್ಜಪ್ಪ ವಡೆಯರಹಳ್ಳಿ ಗ್ರಾಮದ ರಕ್ಷಿತಾ (19) ಮೃತ ವಿದ್ಯಾರ್ಥಿನಿ. ಈಕೆ ಚಂದ್ರಮ್ಮ-ನಾಗರಾಜ್​ ದಂಪತಿಯ ಪುತ್ರಿ. ಈ ಯುವತಿಯ ತಂದೆ ಮೃತಪಟ್ಟಿದ್ದು, ತಾಯಿಯೇ ಕುಟುಂಬ ನಿರ್ವಹಣೆ ಮಾಡಬೇಕಿದೆ. ಅಲ್ಲದೆ ಬಡತನ ಇರುವುದರಿಂದ ಪದವಿ ಶಿಕ್ಷಣಕ್ಕೆ ಸೇರುವುದು ಬೇಡ ಎಂದು ತಾಯಿ ಹೇಳಿದ್ದರು.

ದಾವಣಗೆರೆಯ ಖಾಸಗಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿದ್ದ ಯುವತಿ, ಪದವಿ ಶಿಕ್ಷಣಕ್ಕೆ ಸೇರಲಾಗುತ್ತಿಲ್ಲ ಎಂಬ ಬೇಸರದಿಂದ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net