More

    ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ

    ತುಮಕೂರು: ಹೆರಿಗೆ ವೇಳೆ ಗರ್ಭಿಣಿಯೊಬ್ಬರು ಸಾವಿಗೀಡಾಗಿರುವುದು ಆಕೆಯ ಸಂಬಂಧಿಕರನ್ನು ರೊಚ್ಚಿಗೆಬ್ಬಿಸಿದ್ದು, ಅವರು ವೈದ್ಯರ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೆ ಅವರ ಬಂಧನಕ್ಕೂ ಆಗ್ರಹ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ಜೇನುಕಲ್​ ನರ್ಸಿಂಗ್ ಹೋಮ್​ನಲ್ಲಿ ಈ ಘಟನೆ ನಡೆದಿದೆ.

    ಕಿಬ್ಬನಹಳ್ಳಿಯ ಕುಂದೂರು ಗ್ರಾಮದ ನಿವಾಸಿ ಮಮತಾ (34) ಮೃತಪಟ್ಟವರು. ಗರ್ಭಿಣಿಯಾಗಿದ್ದ ಇವರು ಹೆರಿಗೆಗಾಗಿ ಶನಿವಾರ ರಾತ್ರಿ ಜೇನುಕಲ್ ನರ್ಸಿಂಗ್ ಹೋಮ್​ಗೆ ದಾಖಲಾಗಿದ್ದರು. ಆರಂಭದಲ್ಲಿ ನಾರ್ಮಲ್ ಡೆಲಿವರಿ ಮಾಡುವುದಾಗಿ ಹೇಳಿದ್ದ ವೈದ್ಯರು ಸ್ವಲ್ಪಹೊತ್ತಿನ ಬಳಿಕ ಸಿಜೇರಿಯನ್​ ಮಾಡಬೇಕು ಎಂದಿದ್ದಾರೆ.

    ಸಿಜೇರಿಯನ್ ನಡೆದ ಒಂದು ಗಂಟೆ ಬಳಿಕ ಮಹಿಳೆ ರಕ್ತವಾಂತಿ ಮಾಡಿಕೊಂಡಿದ್ದು, ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷವೇ ಗರ್ಭಿಣಿ ಸಾವಿಗೆ ಕಾರಣ ಎಂದು ಮಹಿಳೆಯ ಪೋಷಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ವೈದ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

    ಇಲ್ಲಿ 4 ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಜಾಸ್ತಿ ಸೌಲಭ್ಯ; ಶಿಕ್ಷಣ-ಉದ್ಯೋಗಕ್ಕೂ ಸಿಗುತ್ತೆ ಆದ್ಯತೆ!

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts