ತಾಯಿ ಹಾಗೂ ಮಕ್ಕಳಿಬ್ಬರು 'ಕೆರೆಗೆ ಹಾರ'; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

Feature 2
Published on

ಬಳ್ಳಾರಿ: ಸಾಲಭಾದೆ ತಾಳಲಾಗದೆ ಮೂವರು 'ಕೆರೆಗೆ ಹಾರ' ಆಗಿದ್ದಾರೆ. ಸಾಲದ ಹೊರೆಯಿಂದ ನೊಂದಿರುವ ರೈತ ಮಹಿಳೆ ಮಕ್ಕಳಿಬ್ಬರ ಜತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಸಿರುಗುಪ್ಪದ ಶಾಲಿಗನೂರು ನಿವಾಸಿಗಳಾಗಿದ್ದ ನಾಗರತ್ನ (40), ಶ್ರುತಿ (12), ಗಿರಿಜಾ (7) ಮೃತಪಟ್ಟವರು. ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಇವರು ಗ್ರಾಮದ ಹೊರಭಾಗದ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ನಾಗರತ್ನ ಆಂಧ್ರ ಬ್ಯಾಂಕ್​ನಲ್ಲಿ 5.6 ಲಕ್ಷ ರೂಪಾಯಿ ಮಾತ್ರವಲ್ಲದೆ ಖಾಸಗಿಯಾಗಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net