More

    ಪೋರ್ನ್​ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್​​: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!

    ಕೋಲ್ಕತ: ಅಶ್ಲೀಲ ವಿಡಿಯೋ ಜಾಲತಾಣದಲ್ಲಿ ತಮ್ಮದೇ ಬೆಡ್​ ರೂಮ್​ ವಿಡಿಯೋ ನೋಡಿ ಅಘಾತಕ್ಕೆ ಒಳಗಾಗಿರುವ ದಂಪತಿ, ಇದೀಗ ಸೈಬರ್​ ಕ್ರೈಂ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಳಕಿಗೆ ಬಂದಿದೆ.

    ದಂಪತಿ ಇಬ್ಬರು ಕೋಲ್ಕತದ ನಿವಾಸಿಗಳು. ಒಮ್ಮೆ ಪತಿ ತನ್ನ ಮನೆಯಲ್ಲಿ ಪೋರ್ನ್​ ವಿಡಿಯೋಗಳನ್ನು ನೋಡುವಾಗ ವಿಡಿಯೋವೊಂದನ್ನು ಗಮನಿಸಿದ್ದಾನೆ. ಅದರಲ್ಲಿ ಪತ್ನಿ ಮತ್ತು ಆತ ತಮ್ಮ ಬೆಡ್​ ರೂಮ್​ನಲ್ಲಿ​ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯವನ್ನು ನೋಡಿ ಶಾಕ್​ ಆಗಿದ್ದಾನೆ. ಬಳಿಕ ವೆಬ್​ಸೈಟ್​ಗೆ ವಿಡಿಯೋ ಅಪ್​ಲೋಡ್​ ಆಗಿದ್ದು ಹೇಗೆ? ವಿಡಿಯೋವನ್ನು ಹೇಗೆ ರೆಕಾರ್ಡ್​ ಮಾಡಲಾಯಿತು? ಎಂದು ತಲೆ ಕೆಡಿಸಿಕೊಂಡು ತಕ್ಷಣ ಬೆಡ್​ರೂಮ್​ಗೆ ಓಡಿದ್ದಾನೆ. ರಹಸ್ಯ ಕ್ಯಾಮೆರಾ ಏನಾದರೂ ಇಟ್ಟಿದ್ದಾರಾ ಎಂದು ಹುಡುಕಾಡಿದ್ದಾನೆ. ಆದರೆ, ಆತನ ಕಣ್ಣಿಗೆ ಯಾವುದು ಬೀಳದಿದ್ದಾಗ ತಕ್ಷಣ ಸೈಬರ್​ ಕ್ರೈಂ ಠಾಣೆಗೆ ಧಾವಿಸಿ ದೂರು ನೀಡುತ್ತಾರೆ.

    ಇದನ್ನೂ ಓದಿರಿ: ಸಿಡಿ ಕೇಸ್​ಗೆ ಮತ್ತೊಂದು ಟ್ವಿಸ್ಟ್: ಹನಿ’ಟ್ರ್ಯಾಪ್’ ಸೀಕ್ರೇಟ್​ ರಿವೀಲ್​!

    ಬಳಿಕ ನಡೆದ ಪೊಲೀಸ್​ ತನಿಖೆಯಲ್ಲಿ ಶಾಕಿಂಗ್​ ವಿಚಾರವೊಂದು ಬೆಳಕಿಗೆ ಬಂದಿದೆ. ದಂಪತಿ ತಮ್ಮ ಲಿವಿಂಗ್​ ರೂಮ್​ನಲ್ಲಿ ಸ್ಮಾರ್ಟ್​ ಟಿವಿಯನ್ನು ಹೊಂದಿದ್ದಾರೆ. ಕ್ಯಾಮೆರಾ ಸೇರಿದಂತೆ ಟಿವಿಯನ್ನು ತಯಾರಿಸಲಾಗಿದೆ. ಟಿವಿಯು ವೈಫೈಗೆ ಕನೆಕ್ಟ್​ ಆಗಿದೆ. ಸೈಬರ್​ ಹ್ಯಾಕರ್​ಗಳು ವಿದೇಶದಿಂದ ಆನ್​ಲೈನ್​ ಮೂಲಕ ಟಿವಿಯನ್ನು ಹ್ಯಾಕ್​ ಮಾಡಿದ್ದಾರೆ. ಟಿವಿ ಕ್ಯಾಮೆರಾ ಸಹಾಯದಿಂದ ಪತಿ-ಪತ್ನಿಯ ಸರಸ ಸಲ್ಲಾಪದ ದೃಶ್ಯವನ್ನು ರೆಕಾರ್ಡ್​ ಮಾಡಿ ಅದನ್ನು ಪೋರ್ನೋಗ್ರಫಿ ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿರುವುದು ತನಿಖೆ ನಂತರ ಗೊತ್ತಾಗಿದೆ.

    ಈ ಒಂದು ಘಟನೆ ಕೇವಲ ದಂಪತಿಗಳಿಗೆ ಮಾತ್ರ ಪರಿಣಾಮ ಬೀರಲಿಲ್ಲ. ಇದರೊಂದಿಗೆ ಲ್ಯಾಪ್​ಟಾಪ್​ ಮತ್ತು ಮನೆಯಲ್ಲಿ ಸ್ಮಾರ್ಟ್​ ಟಿವಿ ಇರುವ ದಂಪತಿಗಳಿಗೂ ಇದೇ ಭಯ ಕಾಡತೊಡಗಿದೆ. ಇದರಿಂದ ತಿಳಿದುಬಂದ ಎಚ್ಚರಿಕೆ ಅಂಶಗಳೆಂದರೆ, ಅಗತ್ಯವಿಲ್ಲದಿದ್ದಾಗ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಟಿವಿಗಳ ಕ್ಯಾಮೆರಾಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಬೇಕು ಮತ್ತು ಆಗಾಗ ವೈಫೈ ಪಾಸ್​ವರ್ಡ್​ಗಳನ್ನು ಬದಲಾಯಿಸಬೇಕು. ಅದರಲ್ಲೂ ಖಾಸಗಿ ಸಮಯ ಕಳೆಯುವಾಗ ಇಂತಹ ಮುನ್ನೆಚ್ಛರಿಕಾ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ.

    ಇದನ್ನೂ ಓದಿರಿ: ಫೇಸ್​ಬುಕ್​ನಲ್ಲಿ ಈಕೆಯ ಬಲೆಗೆ ಬಿದ್ದವರ ಗತಿ ಅಧೋಗತಿ: ಚಾಲಾಕಿ ಯುವತಿಯ ಖತರ್ನಾಕ್​ ಕೆಲಸವಿದು!

    ಇನ್ನು ಸ್ಮಾರ್ಟ್​ ಟಿವಿ ಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಗೊತ್ತಿಲ್ಲದ ಕಂಪನಿಗಳಿಂದ ಟಿವಿ ಕೊಳ್ಳುವಾಗ ಇಂತಹ ಸಮಸ್ಯಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ವಾಸ್ತವವಾಗಿ ಸ್ಮಾರ್ಟ್ ಟಿವಿಯನ್ನು ಭಾರತೀಯ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಮಾಡಬೇಕಾಗಿದೆ. ಆದರೆ, ಕೆಲವು ವಿದೇಶಿ ಕಂಪನಿಗಳು ಅಂತಹ ಕೆಲಸವನ್ನು ಮಾಡುತ್ತಿಲ್ಲ. ಆದ್ದರಿಂದ ಬೆಡ್​ರೂಮ್​ನಲ್ಲಿ ಖಾಸಗಿ ಕ್ಷಣ ಕಳೆಯುವಾಗ ಎಚ್ಚರಿಕೆ ವಹಿಸಿ ಎಂದು ಸೈಬರ್​ ಕ್ರೈಂ ಮತ್ತೊಮ್ಮೆ ಎಚ್ಚರಿಸಿದೆ. (ಏಜೆನ್ಸೀಸ್​)

    VIDEO| ಇದ್ದಕ್ಕಿದ್ದಂತೆ 35 ಕಿ.ಮೀ. ವರೆಗೆ ಹಿಮ್ಮುಖವಾಗಿ ಚಲಿಸಿದ ರೈಲು: ಮಾರ್ಗ ಮಧ್ಯೆ ಚಾಲಕನಿಗೆ ಎದುರಾಗಿದ್ದೇನು?

    ಸ್ನೇಹಿತನ ಹೊಸ ರಾಯಲ್​ ಎನ್ಫೀಲ್ಡ್​ ಬೈಕ್​ ಏರಿದ ಯುವಕ ದುರಂತ ಸಾವು..!

    ಚಿನ್ನದಂಥ ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಂದೆ: ಕಾಸರಗೋಡಿನಲ್ಲಿ ಹೃದಯವಿದ್ರಾವಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts