

ಕೊಡಗು: ದನವನ್ನು ಮೇಯಿಸಲು ಹೋಗಿದ್ದಾಗ ನೀರುಪಾಲಾಗುತ್ತಿದ್ದ ಮಗನನ್ನು ರಕ್ಷಿಸಲು ಧಾವಿಸಿದ್ದ ತಾಯಿಯೂ ಆತನೊಂದಿಗೆ ನೀರುಪಾಲಾದ ಘಟನೆ ನಡೆದಿದ್ದು, ಇದೀಗ ಒಂದು ದಿನದ ಬಳಿಕ ಪುತ್ರನ ಶವವೂ ಪತ್ತೆಯಾಗಿದೆ. ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಿನ್ನೆ ಈ ದುರ್ಘಟನೆ ನಡೆದಿತ್ತು.
ತಾಯಿ ರೇವತಿ ಹಾಗೂ ಆಕೆಯ ಪುತ್ರ, 12 ವರ್ಷದ ಕಾರ್ಯಪ್ಪ ನೀರುಪಾಲಾಗಿ ಮೃತಪಟ್ಟವರು. ಇವರು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಸಿ. ಪ್ರಕಾಶ್ ಎಂಬವರ ಪತ್ನಿ ಹಾಗೂ ಪುತ್ರ. ಇದೇ ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ಈ ದುರಂತ ಸಂಭವಿಸಿತ್ತು.
ಸ್ಥಳೀಯರು ನಿನ್ನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಅಷ್ಟರಲ್ಲಾಗಲೇ ರೇವತಿ ಸಾವಿಗೀಡಾಗಿದ್ದು, ಅವರ ಶವವವನ್ನು ಹೊರತೆಗೆಯಲಾಗಿತ್ತು. ಆದರೆ ನಿನ್ನೆ ಇಡೀ ಜಾಲಾಡಿದರೂ ಪುತ್ರನ ಪತ್ತೆ ಆಗಿರಲಿಲ್ಲ. ಇಂದೂ ಶೋಧ ಮುಂದುವರಿಸಿದಾಗ ಪುತ್ರನ ಶವ ಸಿಕ್ಕಿದೆ.