

ನೆಲ್ಯಾಡಿ: ಕೊಕ್ಕಡ ಹಿಂದು ಜಾಗರಣ ವೇದಿಕೆ ಹಾಗೂ ಶಿವಾಜಿ ಗ್ರೂಪ್ ಆಫ್ ಬಾಯ್ಸ ಕೊಕ್ಕಡ ಘಟಕ ಆಶ್ರಯದಲ್ಲಿ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ಹಳ್ಳಿಗೇರಿಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಭಾನುವಾರ ನಡೆಯಿತು. ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ವಿ.ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳ್ತಂಗಡಿ ತಾಲೂಕು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅತಿಥಿಗಳಾಗಿ ಭಾಗವಹಿಸಿದರು. ಪ್ರಮುಖರಾದ ಬಾಲಕೃಷ್ಣ ಕೆದಿಲಾಯ, ಬಾಲಕೃಷ್ಣ ನೈಮಿಷ, ಚಂದನ್ ಪ್ರಸಾದ್ ಕಾಮತ್, ವಿಶ್ವನಾಥ ಕೊಡಿಂಗೇರಿ, ಕೃಷ್ಣ ಭಟ್ ಹಿತ್ತಿಲು, ಗಣೇಶ್ ಗೌಡ ಕಲಾಯಿ, ಡಾ.ಗಣೇಶ್ ಪ್ರಸಾದ್, ಸಮಿತಿ ಅಧ್ಯಕ್ಷ ಕಿರಣ್ ಪೂಜಾರಿ, ಕಾರ್ಯದರ್ಶಿ ಶರತ್ ಹಳ್ಳಿಗೇರಿ ಉಪಸ್ಥಿತರಿದ್ದರು. ಶಿಕ್ಷಕ ದಾಮೋದರ ಅಜ್ಜಾವರ ಸ್ವಾಗತಿಸಿ, ಸಚಿನ್ ವಂದಿಸಿದರು. ಕೇಶವ ಹಳ್ಳಿಗೇರಿ ನಿರೂಪಿಸಿದರು. ಆಟೋಟ ಸ್ಪರ್ಧೆಗಳನ್ನು ಸುರೇಶ್ ಪಡಿಪಂಡ ನಿರೂಪಿಸಿದರು.