ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠ ನವರಾತ್ರೋತ್ಸವ

Navarathri Article
Published on

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಅ.3ರಿಂದ 12ರವರೆಗೆ ನವರಾತ್ರೋತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ.

3ರಂದು ಶ್ರೀಗಾಯತ್ರಿ ಮಾತೆಗೆ ಪಂಚಾಮೃತಾಭಿಷೇಕ, ಗಣಹೋಮ, 4ರಂದು ಸಂಜೆ 6ರಿಂದ ಪ್ರಶಾಂತ್ ವರ್ಮ ತ್ರಿಶೂರ್ ಅವರಿಂದ ಭಕ್ತಿಗಾನ ಸುಧಾ, 8ರಂದು ಲಲಿತ ಪಂಚಮಿ, 9ರಂದು ಬೆಳಗ್ಗೆ ಪೂಜೆಯ ನಂತರ ಶಾರದಾ ಪ್ರತಿಷ್ಠಾಪನೆ, ನಂತರ ವಿದ್ಯಾರ್ಥಿಗಳಿಗಾಗಿ ಸರಸ್ವತಿ ಹವನ, 11ರಂದು ದುರ್ಗಾಷ್ಟಮಿ, ಪೂರ್ವಾಹ್ನ 11ಕ್ಕೆ ವಿದುಷಿ ಉಷಾ ಈಶ್ವರ್ ಭಟ್ ಕಾಸರಗೋಡು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 12ರಂದು ಪ್ರಾತಃಕಾಲ ಶ್ರೀ ಗಾಯತ್ರಿ ಮಾತೆಗೆ ವಿಶೇಷ ಸೀಯಾಳಾಭಿಷೇಕ, ಬೆಳಗ್ಗೆ 7.30 ಕ್ಕೆ ವಿದ್ಯಾರಂಭ, 8ಕ್ಕೆ ವಾಹನಪೂಜೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಶ್ರೀ ಮಠದ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಶಾರದಾ ವಿಸರ್ಜನೆ, ಅದೇ ದಿನ ಬೆಳಗ್ಗೆ 9ರಿಂದ ಗಾಯತ್ರಿ ಮತ್ತು ಶ್ರಾವಣ್ಯ ಕೊಂಡೆವೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹ ಭಾಜನರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net