

ಕಟೀಲು: ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಪ್ರಸಂಗಗಳಿಗೆ ಜೀವ ತುಂಬಬಹುದಾದ ಅದ್ಭುತ ಕಲಾವಿದ. ಶೇಣಿಯವರ ನಂತರ ಸ್ಥಾನದಲ್ಲಿ ನಿಲ್ಲಬಹುದಾದ ಕಲಾವಿದರಾಗಿದ್ದಾರೆ ಎಂದು ವಾನವ ಹಕ್ಕು ಆಯೋಗದ ಟಿ. ಶ್ಯಾಮ್ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ಆಟ ಕೂಟಗಳ ಖ್ಯಾತಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಸಂದರ್ಭ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ವಾತನಾಡಿದರು.
ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಸನ್ಮಾನ ಸ್ವೀಕರಿಸಿ ವಾತನಾಡಿ, ನನ್ನ ಬೆಳವಣಿಗೆಯಲ್ಲಿ ಕಲ್ಲಾಡಿ ವಿಠಲ ಶೆಟ್ಟರಿಂದ ಆದಿಯಾಗಿ ಧರ್ಮಸ್ಥಳ ಕೇಂದ್ರದಲ್ಲಿ ಸಿಕ್ಕ ಗುರುಗಳು, ಕಟೀಲು ಮೇಳದಲ್ಲಿ ಬಲಿಪರು, ಹಿರಿಯ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸವಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಂಡಿದ್ದೇನೆ. ಕಲಾಭಿವಾನಿಗಳು ಕಟೀಲಿನ ಆಸ್ರಣ್ಣ ಬಂಧುಗಳು, ಸಹಕಲಾವಿದರು ಕೊಟ್ಟ ಪ್ರೀತಿ ದೊಡ್ಡದು. 42 ವರ್ಷಗಳಿಂದ ಕಟೀಲು ಮೇಳದಲ್ಲೇ ಸೇವೆ ಸಲ್ಲಿಸಿದ ನನಗೆ ಮೇಳ ಬಿಡಬೇಕೆಂದು ಅನಿಸಲು ಕೊರತೆಯೇನೂ ಆಗಿಲ್ಲ ಎಂದರು.
ವಿದ್ವಾಂಸ ಉವಾಕಾಂತ ಭಟ್ಟರು ಅಭಿನಂದನೆ ವಾತುಗಳನ್ನಾಡಿದರು.
ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬಿಪಿನ್ ಚಂದ್ರಶೆಟ್ಟಿ ಕೊಡೆತ್ತೂರುಗುತ್ತು, ಪ್ರವೀಣ್ ಭಂಡಾರಿ ಕೊಡೆತ್ತೂರುಗುತ್ತು, ಡಾ.ಹರಿಕೃಷ್ಣ ಪುನರೂರು, ಪ್ರದೀಪ ಕುವಾರ್ ಕಲ್ಕೂರ, ರಾವೇಂದ್ರ ಆಚಾರ್ಯ ಮತ್ತಿತರರಿದ್ದರು.
ಶ್ರೀ ದುರ್ಗಾಮಕ್ಕಳ ಮೇಳದ ಕಲಾವಿದರು ಅರವತ್ತು ಹರಿವಾಣಗಳಲ್ಲಿ ಫಲವಸ್ತುಗಳನ್ನು ಸಮರ್ಪಿಸಿದರು. ರವೀಂದ್ರ ಅತ್ತೂರು, ಸುದರ್ಶನ ಆಚಾರ್ ಷಷ್ಟಿಪೂರ್ತಿಯ ಸಲುವಾಗಿ ಸುಣ್ಣಂಬಳರನ್ನು ಮಂತ್ರೋಕ್ತದ ಮೂಲಕ ಹಾರೈಸಲಾಯಿತು. ಅನೇಕ ಅಭಿವಾನಿಗಳು, ಕಟೀಲು ಮೇಳದ ಕಲಾವಿದರು ಕಿರೀಟ ಛಾಯಾಚಿತ್ರ ಹಾರ ವಸ, ಬಂಗಾರದ ಸರ, ಹಾರ ಇತ್ಯಾದಿಗಳ ಮೂಲಕ ಸುಣ್ಣಂಬಳ ದಂಪತಿಯನ್ನು ಗೌರವಿಸಿದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಮಧೂರು ವಾಸುದೇವ ರಂಗಾ ಭಟ್ ನಿರೂಪಿಸಿದರು. ವಾಸುದೇವ ಶೆಣೈ ವಂದಿಸಿದರು.