

ಕಾಸರಗೋಡು: ಅಣಂಗೂರು ಶ್ರೀ ಶಾರದಾಂಬಾ ಭಜನಾಮಂದಿರದಲ್ಲಿ ನವರಾತ್ರಿ ಮಹೋತ್ಸವ ಅ.3ರಿಂದ 12ರವರೆಗೆ ಜರುಗಲಿದೆ. 3ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಪ್ರತಿದಿನ ರಾತ್ರಿ 8ಕ್ಕೆ ಭಜನೆ, 9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.
3ರಂದು ರಾತ್ರಿ 8ಕ್ಕೆ ಭಜನೆ, 9ಕ್ಕೆ ಮಹಾಪೂಜೆ, 9.30ಕ್ಕೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದಿಂದ ನಾಟ್ಯಾರ್ಚನೆ ನಡೆಯುವುದು. 4ರಂದು ರಾತ್ರಿ 9.30ಕ್ಕೆ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮತ್ತು ಬಳಗದವರಿಂದ ಹರಿಕತೆ, 5ರಂದು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, 6ರಂದು ರಾತ್ರಿ 9.30ಕ್ಕೆ ಮಿಲ್ಲೇನಿಯಂ ಆರ್ಟ್ಸ್ ಕೋಯಿಕ್ಕೋಡ್ ಅವರಿಂದ ಆರ್ಕೆಸ್ಟ್ರಾ, 7ರಂದು ರಾತ್ರಿ 9.30ಕ್ಕೆ ಸಮನ್ವಿತಾ ಗಣೇಶ್ ಹಾಗೂ ಗ್ರೀಷ್ಮಾ ವಿಜಯನ್ ಅವರಿಂದ ಗಾನಾರ್ಚನೆ, 8ರಂದು ರಾತ್ರಿ 9.30ಕ್ಕೆ ಅಡೂರು ಶ್ರೀ ಧರ್ಮಶಾಸ್ತಾ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ಬಯಲಾಟ, 9ರಂದು ಶಾರದೋತ್ಸವ ಅಂಗವಾಗಿ ಮಧ್ಯಾಹ್ನ 12ಕ್ಕೆ ಲಲಿತಾ ಸಹಸ್ರನಾಮ, ರಾತ್ರಿ 11ಕ್ಕೆ ಪೂರ್ಣಾಲಂಕಾರ ಪೂಜೆ ನಡೆಯುವುದು. 10ರಂದು ರಾತ್ರಿ 9.30ಕ್ಕೆ ನಾಟ್ಯ ಮಂಟಪ ಮಧೂರು ವತಿಯಿಂದ ನಾಟ್ಯಾರ್ಚನೆ, 11ರಂದು ಬೆಳಗ್ಗೆ 11ಕ್ಕೆ ವಾಹನ ಪೂಜೆ, ಸಂಜೆ 4ಕ್ಕೆ ಧಾರ್ಮಿಕ ಸಭೆ ನಡೆಯುವುದು. 12ರಂದು ಬೆಳಗ್ಗೆ 11ಕ್ಕೆ ಅಕ್ಷರಾಭ್ಯಾಸ ನಡೆಯುವುದು.