

ಬೆಂಗಳೂರು: ನಾಲ್ಕೈದು ದಿನಗಳ ಹಿಂದಷ್ಟೇ ಬಂಧನಕ್ಕೆ ಒಳಗಾಗಿರುವ ಕರ್ನಾಟಕ ರಾಜ್ಯ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ನಟರಾಜ್ ವಿರುದ್ಧ ಸಾಲು ಸಾಲು ದೂರುಗಳು ಬರಲಾರಂಭಿಸಿವೆ.
ನಿವೇಶನ ಮಾರಾಟದಲ್ಲಿ ವಂಚನೆ ಮಾಡಿರುವ ಆರೋಪದಲ್ಲಿ ನ. 10ರಂದು ನಟರಾಜ್ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದರು. ಇದೀಗ ಈತನ ವಿರುದ್ಧ ದೂರುಗಳ ಮಹಾಪೂರವೇ ಹರಿದು ಬರುತ್ತಿದ್ದು, ಇದುವರೆಗೆ ನೂರಕ್ಕೂ ಹೆಚ್ಚು ದೂರುಗಳು ಬಂದಿದ್ದು, ಪೊಲೀಸರು ಅವುಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ನಟರಾಜ್ ನಕಲಿ ದಾಖಲೆ ಸೃಷ್ಟಿಸಿ, ಸರ್ವೇ ನಂಬರ್ ಹಾಗೂ ಷೆಡ್ಯೂಲ್ ಬದಲಿಸಿ ಹಲವರಿಗೆ ವಂಚನೆ ಮಾಡಿದ್ದ ಎನ್ನಲಾಗಿದೆ. ಸುಮಾರು 75 ಎಕರೆಯ ಜಾಗದಲ್ಲಿ ಸೈಟ್ಗಳನ್ನು ಮಾಡಿ, ಒಂದೇ ಸೈಟನ್ನು ಹಲವರಿಗೆ ಮಾರಾಟ ಮಾಡಿರುವ ಆರೋಪ ಈತನ ಮೇಲಿದೆ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.