ಚಿಕ್ಕಿ ತಿಂದು 40ಕ್ಕೂ ಅಧಿಕ Students ಅಸ್ವಸ್ಥ; ಆಸ್ಪತ್ರೆಗೆ ದಾಖಲು, ಓಡೋಡಿ ಬಂದ ಅಧಿಕಾರಿಗಳು

Students
Published on

ತುಮಕೂರು: ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟದೊಂದಿಗೆ ದುರ್ವಾಸನೆ ಹಾಗೂ ಹುಳ ಬಿದ್ದಿದ್ದ ಚಿಕ್ಕಿ ತಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಹೊಟ್ಟೆನೊವು ಹಾಗೂ ವಾಂತಿಯಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಅಂಬುಲೆನ್ಸ್ ಸೇವೆ ಸಿಗದ ಕಾರಣ ತಕ್ಷಣವೇ ಎಚ್ಚೆತ್ತುಕೊಂಡು ಅಸ್ವಸ್ಥಗೊಂಡ ಮಕ್ಕಳನ್ನು ಗ್ರಾಮದ ಖಾಸಗಿ ಕಾರಿನಲ್ಲಿ ಪಟ್ಟಣದ ಸರ್ಕಾರಿ ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಚಿಕ್ಕಿಯಲ್ಲಿ ಹುಳ

ವಿದ್ಯಾರ್ಥಿಗಳಿಗೆ ಬಿಸಯೂಟದೊಂದಿಗೆ ಚಿಕ್ಕಿ ನೀಡಲಾಗಿತ್ತು. ಇದರಲ್ಲಿ ಹುಳು ಸಿಕ್ಕಿದ್ದು, ಇದರಿಂದಲೇ ಮಕ್ಕಳಿಗೆ ಬಿಸಿಯೂಟ ಸೇವನೆ ನಂತರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿದೆ ಎಂದು ವಿದ್ಯಾರ್ಥಿನಿ ಹರ್ಷಿತಾ ಹೇಳಿದ್ದಾರೆ. ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಕೂಲಿ ಕೆಲಸ ವಾಡಿಕೊಂಡಿದ್ದ ಪಾಲಕರು ಆಸ್ವತ್ರೆ ಬಳಿ ಜವಾಯಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಗ್ಗೆ ಮನೆಯಲ್ಲಿದ್ದರೂ ವಾಹಿತಿಯೇ ನೀಡಿಲ್ಲಾ ಮೂರನೇ ವ್ಯಕ್ತಿಯಿಂದ ವಿಷಯ ತಿಳಿದು ಬಂದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಯೂಟದೊಂದಿಗೆ ಮಕ್ಕಳಿಗೆ ನೀಡಿದ್ದ ಚಿಕ್ಕಿ ಹಾಗೂ ಮೊಟ್ಟೆಯನ್ನು ತಿಂದಿರುವ ಮಕ್ಕಳಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿಯಾಗಿದೆ. ಚಿಕ್ಕಿಯಲ್ಲಿ ಹುಳ ಕಂಡಿರುವುದು ನಿಜ, ಮೊಟ್ಟೆ ತಿಂದವರಿಗೂ ಆರೋಗ್ಯ ಸಮಸ್ಯೆ ಉಂಟಾಗಿದೆ. ಬಿಸಿಯೂಟದಿಂದಲೇ ಆಗಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Students

ಆಸ್ಪತ್ರೆಗೆ ಓಡೋಡಿ ಬಂದ ಅಧಿಕಾರಿಗಳು

ವಿಷಯ ತಿಳಿಯುತಿದ್ದಂತೆ ತಾಲೂಕುಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್ ವರದರಾಜು, ಇಒ ಜಾನಕೀರಾಮ್, ಇಒ ಇಮದ್ರಾಣಮ್ಮ, ಅಕ್ಷರ ದಾಸೋಹ ವ್ಯವಸ್ಥಾಪಕ ಶಂಕರಪ್ಪ ಇನ್ನಿತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.

ನಂತರ ತಹಸೀಲ್ದಾರ್ ವರದರಾಜು ವಾತನಾಡಿ, ಬಿಸಿ ಊಟ ಸೇವನೆ ನಂತರ ಕೆಲ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಕ್ಷರ ದಾಸೋಹ ಸಹಾಯ ನಿರ್ದೇಶಕ ಶಂಕರಪ್ಪ ವಾತನಾಡಿ, ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ಮತ್ತು ಬಾಳೆಹಣ್ಣು ನೀಡಲಾಗುತ್ತದೆ. ಚಿಕ್ಕಿಯನ್ನು ಆ ಶಾಲೆಯ ಮುಖ್ಯಶಿಕ್ಷಕರು ಮತ್ತು ಎಸ್‌ಡಿಎಮ್‌ಸಿ ಅವರೇ ಖರೀದಿಸುತ್ತಾರೆ ಎಂದು ವಾಹಿತಿ ನೀಡಿದರು. ಈ ಬಗ್ಗೆ ಪಾಲಕರು ಪ್ರತಿಕ್ರಿಯಿಸಿ ಶಾಲೆಯಲ್ಲಿ ಆಹಾರ ನೀಡುವಾಗ ಗುಣಮಟ್ಟ ಪರೀಕ್ಷಿಸಿಕೊಳ್ಳಬೇಕು, ಮಕ್ಕಳಿಗೆ ನೀಡಿದ ಚಿಕ್ಕಿ ಗುಣಮಟ್ಟದ್ದೇ ಅಲ್ಲವೇ ಎಂದು ಪರೀಕ್ಷಿಸಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net