Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ-ಪಾಕ್​; ಸಂಕಷ್ಟಕ್ಕೆ ಸಿಲುಕಿದ ಐಸಿಸಿ, ಈ ದಿನಾಂಕದಂದು ಸಭೆ ನಿಗದಿ

Champions Trophy
Published on

ನವದೆಹಲಿ: 2025ರ ಫೆಬ್ರವರಿ ಮಾರ್ಚ್​ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಈಗಾಗಲೇ ತಯಾರಿ ನಡೆಯುತ್ತಿದ್ದು, ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಕಿತ್ತಾಟದಿಂದಲೇ ಟೂರ್ನಿ ಆರಂಭಕ್ಕೂ ಮುಂಚಿನಿಂದಲೇ ಸದ್ದು ಮಾಡುತ್ತಿದ್ದು, ಈವರೆಗೂ ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಐಸಿಸಿ (ICC) ಬಿಸಿಸಿಐ (BCCI) ಹಾಗೂ ಪಿಸಿಬಿ (PCB) ಜತೆ ನಡೆಸಿದ ಸಫಲವಾಗದ ಕಾರಣ ಮತ್ತೊಂದು ಸುತ್ತಿನ ಮೀಟಿಂಗ್​ಅನ್ನು ನವೆಂಬರ್​ 30ಕ್ಕೆ ಆಯೋಜನೆ ಮಾಡಿದೆ.

ಐಸಿಸಿ (ICC) ನಡೆಸಿದ ಸಭೆಯಲ್ಲಿ ಪ್ರಮುಖವಾಗಿ ಮೂರು ವಿಚಾರಗಳನ್ನು ಚರ್ಚಿಸಲಾಗಿದೆ. ಮೊದಲ ಆಯ್ಕೆಯಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ?(Hybrid Model) ನಡೆಸುವುದು. ಆ ಪ್ರಕಾರ, ಟೀಮ್ ಇಂಡಿಯಾದ (Team India) ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲೇ (Pakistan) ನಡೆಸುವುದು. ಎರಡನೆಯ ಆಯ್ಕೆಯೆಂದರೆ, ಇಡೀ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದ ಹೊರಗೆ ನಡೆಸುವುದು. ಆದರೆ, ಪಂದ್ಯಾವಳಿಯ ಹೋಸ್ಟಿಂಗ್ ಹಕ್ಕುಗಳನ್ನು ಪಿಸಿಬಿಗೆ (PCB)  ನೀಡುವುದು. ಕೊನೆಯ ಆಯ್ಕೆಯೆಂದರೆ ಟೀಮ್​ ಇಂಡಿಯಾವನ್ನು ಹೊರಗಿಟ್ಟು ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ನಡೆಸುವುದು ಎಂಬ ಬಗ್ಗೆ ಚರ್ಚಿಸಲಾಗಿದೆ. ಆದರೆ ಬಿಸಿಸಿಐ (BCCI) ಹಾಗೂ ಪಿಸಿಬಿ (PCB) ಒಮ್ಮತ್ತಕ್ಕೆ ಬಾರದ ಕಾರಣ ಐಸಿಸಿಗೆ (ICC) ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಭೆಯ ಕುರಿತಾಗಿ ಮಾತನಾಡಿರುವ ಐಸಿಸಿಯ (ICC) ಹಿರಿಯ ಅಧಿಕಾರಿಯೊಬ್ಬರು, ಐಸಿಸಿಯು ಇಂದು ಸಂಕ್ಷಿಪ್ತ ಸಭೆ ನಡೆಸಿತು. 2025ರ ಚಾಂಪಿಯನ್ಸ್‌ ಟ್ರೋಫಿ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ಧನಾತ್ಮಕ ನಿರ್ಣಯದೊಂದಿಗೆ ಸಹಕಾರ ನೀಡಲಿವೆ. ಮಂಡಳಿಯು ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ. ಇನ್ನೂ ಕೆಲವು ದಿನಗಳ ವರೆಗೆ ಸಭೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Champions Trophy

ಸಭೆಯ ಬಳಿಕ ಮಾತನಾಡಿರುವ ಪಿಸಿಬಿ ಅಧ್ಯಕ್ಷ (PCB President) ಮೊಹ್ಸಿನ್​ ನಖ್ವಿ, ಸರ್ಕಾರದಿಂದ ಅನುಮತಿ ಸಿಗದ ಕಾರಣ ಭಾರತ ತಂಡವು ಪಾಕ್‌ಗೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದರೂ, ನಾವು ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದಿಲ್ಲ. ನಾವು ನಿಲುವಿಗೆ ಬದ್ಧರಾಗಿರುತ್ತೇವೆ, ಭಾರತ ಪಾಕ್​ಗೆ ಬಾರದಿರುವುದಕ್ಕೆ ಕಾರಣ ಕೇಳಿ ನಾವು ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಅವರ ಉತ್ತರಕ್ಕೆ ಕಾಯುತ್ತಿದ್ದೇವೆ.

ಕ್ರೀಡೆ, ರಾಜಕೀಯ ಎರಡು ಬೇರೆ ವಿಷಯಗಳಾಗಿದ್ದು, ಯಾವುದೇ ದೇಶವು ಎರಡನ್ನು ಬೆರೆಸಬಾರದು ಎಂದು ನಾನು ನಂಬುತ್ತೇನೆ. ಈಗಲೂ ನಾನು ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ನಾನು ಸಕಾರಾತ್ಮಕ ನಿರೀಕ್ಷೆಗಳನ್ನು ಹೊಂದಿದ್ದೇನೆ ಎಂದು ಸಭೆಯ ಬಳಿಕ ಪಿಸಿಬಿ ಅಧ್ಯಕ್ಷ (PCB President)  ಮೊಹ್ಸಿನ್​ ನಖ್ವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net