ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿ; ಹತ್ತಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

Untitled
Published on

ಉತ್ತರಕನ್ನಡ: ಸಮುದ್ರದಲ್ಲಿನ ಅಲೆಗಳ ರಭಸಕ್ಕೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿಯಾಗಿವೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ಪಾತಿದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಿಸಲಾಗಿದೆ.

ಪಾತಿದೋಣಿ ಮೂಲಕ ಮೀ‌ನುಗಾರಿಕೆಗೆ ತೆರಳಿದ್ದ ಮೀನುಗಾರರು, ಅಲೆಯ ರಭಸದಿಂದಾಗಿ ವಾಪಸ್​ ಬರಲಾಗದೆ ಅಪಾಯಕ್ಕೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಕೆಲವು ಪಾತಿದೋಣಿಗಳು ಪಲ್ಟಿಯಾಗಿ ನೀರಲ್ಲಿ ಮುಳುಗಿದ ಪ್ರಕರಣಗಳೂ ಕಂಡುಬಂದಿವೆ. ಈ ವೇಳೆ ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಗಿಲ್ನೆಟ್​ ದೋಣಿ ಮೂಲಕ ರಕ್ಷಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net