ಗಮಕಕಲೆಯಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ

kumaravyasa
ನಾಗೂರಿನ ಸಂದೀಪನ್ ಶಾಲೆಯ ಸಭಾಂಗಣದಲ್ಲಿ ಕುಮಾರವ್ಯಾಸ ಜಯಂತಿ ಮಹೋತ್ಸವಕ್ಕೆ ಡಾ.ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಹಳೆಗನ್ನಡ, ನಡುಗನ್ನಡ ಕಾವ್ಯಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಗಮಕಕಲೆ ಮಹತ್ತರ ಕಾರ್ಯ ಮಾಡುತ್ತಿದೆ. ಸಾಹಿತ್ಯ ಮತ್ತು ಸಂಗೀತದ ರಸಪಾಕದಂತಿರುವ ಗಮಕ ಕಲೆ ಹೊಸ ಪೀಳಿಗೆ ಜನರು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು. ಇದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬೆಳೆಸುತ್ತದೆ ಎಂದು ಉಡುಪಿ ಜಿಲ್ಲಾ ಗಮಕಕಲಾ ಪರಿಷತ್ ಅಧ್ಯಕ್ಷ ಸತೀಶ ಕುಮಾರ್ ಕೆಮ್ಮಣ್ಣು ಹೇಳಿದರು.

ನಾಗೂರಿನ ಸಂದೀಪನ್ ಶಾಲೆಯಲ್ಲಿ ಗಮಕಕಲಾ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಬೈಂದೂರು ತಾಲೂಕು ಘಟಕದ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೈಂದೂರು ತಾಲೂಕು ಗಮಕಕಲಾ ಪರಿಷತ್ ಅಧ್ಯಕ್ಷ ಬಿಜೂರ ವಿಶ್ವೇಶ್ವರ ಅಡಿಗ ಕುಮಾರವ್ಯಾಸನ ಕಾವ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕುಮಾರವ್ಯಾಸ ಭಾರತದ ಅರಣ್ಯಪರ್ವದಲ್ಲಿ ಬರುವ ‘ದೂರ್ವಾಸಾತಿಥ್ಯ’ ಎಂಬ ಕಥಾಭಾಗದ ಗಮಕ ವಾಚನ ವ್ಯಾಖ್ಯಾನ ಗಮಕ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಮತ್ತು ವಿದ್ವಾನ್ ಡಾ.ರಾಘವೇಂದ್ರ ರಾವ್ ನಡೆಸಿಕೊಟ್ಟರು. ಬೈಂದೂರು ಗಮಕಕಲಾ ಪರಿಷತ್ ಕಾರ್ಯದರ್ಶಿ ಮಂಜುನಾಥ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಸಂದೀಪನ್ ಶಾಲೆ ವಿದ್ಯಾರ್ಥಿಗಳು, ಅಧ್ಯಾಪಕರು, ಗಮಕಕಲಾ ಅಭಿಮಾನಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net