

ವಿಜಯವಾಣಿ ಸುದ್ದಿಜಾಲ ಬೈಂದೂರು
ನಿವೃತ್ತಿ ವೃತ್ತಿ ಬದುಕಿಗೆ ಹೊರತು ನಮ್ಮ ಸಾಮಾಜಿಕ ಜೀವನಕ್ಕಲ್ಲ. ವಯಸ್ಸು ಮಾನದಂಡವಾಗಿಸದೇ ಪ್ರತಿಯೊಬ್ಬರಿಗೂ ತಮ್ಮಲ್ಲಿರುವ ಸೂಪ್ತ ಪ್ರತಿಭೆ ಹೊರಹೊಮ್ಮವ ಸಕಾಲವಿದು. ನಿವೃತಿಯ ನಂತರದ ಸ್ವತಂತ್ರ ಬದುಕಿನಲ್ಲಿ ನಮ್ಮ ಪ್ರವೃತ್ತಿಯ ಮೂಲಕ ಜೀವನೋತ್ಸಾಹ ವೃದ್ಧಿಸಿಕೊಳ್ಳಬೇಕು ಎಂದು ಕುಂದಾಪುರದ ವಕೀಲ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.
ಉಪ್ಪುಂದದಲ್ಲಿ ಶನಿವಾರ ಬೈಂದೂರು ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನಿರ್ಗಮನ ಅಧ್ಯಕ್ಷ ಕೆ.ಪುಂಡಲೀಕ ನಾಯಕ್ ನೂತನ ಅಧ್ಯಕ್ಷ ಗಿರೀಶ ಶ್ಯಾನುಭಾಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿವೃತ್ತ ಉಪನ್ಯಾಕ ಎಸ್.ಜನಾರ್ದನ ಮರವಂತೆ, ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಹೆಗ್ಡೆ, ಉಪಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ಈಶ್ವರ್, ಖಜಾಂಚಿ ಸತೀಶ ವಾಮನ ಪೈ ಇದ್ದರು. ಕಾರ್ಯದರ್ಶಿ ಗೋವಿಂದ ಬಿಲ್ಲವ ವರದಿ ಮಂಡಿಸಿದರು. ಸದಸ್ಯೆ ರಾಜೀವಿ ಎಂ. ವಂದಿಸಿದರು. ಗೌರವಾಧ್ಯಕ್ಷ ಗೋವಿಂದ ಎಂ. ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಸಮುದಾಯವನ್ನು ಕಿರಿಯ, ಹಿರಿಯ ನಾಗರಿಕರು ಎಂದು ವರ್ಗೀಕರಿಸುವುದಕ್ಕಿಂತ ಮಾನಸಿಕವಾಗಿ ವೃದ್ಧರಾಗಿರುವ ತರುಣರನ್ನು, ತರುಣ ವೃದ್ಧರು ಹಾಗೂ ಮಾನಸಿಕವಾಗಿ ತರುಣರಾಗಿರುವ ವೃದ್ಧರನ್ನು ವೃದ್ಧ ತರುಣರು ಎಂದು ವರ್ಗೀಕರೀಸುವುದೇ ಸೂಕ್ತ. ವೃದ್ಧಾಪ್ಯದಲ್ಲಿಯೂ ಕ್ರೀಯಾಶೀಲರಾಗಿ ಇರುವವರು ಆರೋಗ್ಯದಿಂದ ಇರುತ್ತಾರೆ ಎನ್ನುವುದನ್ನು ಹಿರಿಯ ನಾಗರೀಕರು ಮರೆಯಬಾರದು. ಎಸ್.ಜನಾರ್ದನ ಮರವಂತೆ ನಿವೃತ್ತ ಉಪನ್ಯಾಸಕ.