ಆಟೋಟ ಸ್ಪರ್ಧೆಯಿಂದ ಆರೋಗ್ಯಕರ ಪೈಪೋಟಿ

sports
ಶಂಕರಪುರದಲ್ಲಿ ತಾಲೂಕು ಮಟ್ಟದ ಕಂದಾಯ ಇಲಾಖೆ ನೌಕರರ ಕ್ರೀಡಾಕೂಟದಲ್ಲಿ ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ಭಾಗವಹಿಸಿದ್ದ ಕಾಪು ತಂಡ ವಿವಿಧ ಬಹುಮಾನ ಗಳಿಸಿತು. ದೇವಕಿ, ರವಿಕಿರಣ್, ಸುನೀಲ್, ಇಜ್ಜಾರ್ ಸಾಬಿರ್ ಇದ್ದರು
Published on

ಪಡುಬಿದ್ರಿ: ಆಟೋಟ ಸ್ಪರ್ಧೆಗಳು ಆರೋಗ್ಯಕರ ಪೈಪೋಟಿ ಬೆಳೆಸುತ್ತವೆ. ಕಚೇರಿ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕರಿಸುತ್ತವೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.

ಶಂಕರಪುರದಲ್ಲಿ ಶನಿವಾರ ಕಾಪು ತಾಲೂಕು ಮಟ್ಟದ ಕಂದಾಯ ಇಲಾಖೆ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತಹಸೀಲ್ದಾರ್ ಭಾಗವಹಿಸಿ ತಂಡ ಬಹುಮಾನ ಗಳಿಸಿತು. ಗ್ರಾಮ ಆಡಳಿತಾಧಿಕಾರಿ ಸಂಘ ಅಧ್ಯಕ್ಷ ಡೇನಿಯಲ್ ಡಿಸೋಜ, ಗ್ರಾಮ ಸಹಾಯಕರ ಸಂಘ ಅಧ್ಯಕ್ಷ ಫಿರೋಜ್ ಖಾನ್, ಉಪತಹಸೀಲ್ದಾರ್‌ಗಳಾದ ದೇವಕಿ, ರವಿಕಿರಣ್, ಕ್ರೀಡಾ ಕಾರ್ಯದರ್ಶಿ ಸುನೀಲ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net