

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನಲ್ಲಿ ಕನ್ಯಾ ಮರಿಯಮ್ಮರವರ ಹುಟ್ಟುಹಬ್ಬವಾದ ಮೊಂತಿ ಹಬ್ಬವನ್ನು ಸೋಮವಾರ ಆಚರಿಸಲಾಯಿತು.
ಬೆಳ್ತಂಗಡಿ ಚರ್ಚ್ ಬಸ್ ಸ್ಟ್ಯಾಂಡ್ ಸರ್ವೀಸ್ ರೋಡ್‌ನಲ್ಲಿ ಹಾಕಲಾದ ಮಂಟಪದಲ್ಲಿ ಕನ್ಯಾ ಮರಿಯಮ್ಮರವರ ಪ್ರಾರ್ಥನೆ ಹಾಗೂ ತೆನೆಯ ಆಶೀರ್ವಚನ ನಡೆಯಿತು.
ಚರ್ಚ್ ಪ್ರಧಾನ ಧರ್ಮಗುರುಗಳಾದ ವಾಲ್ಟರ್ ಡಿಮೆಲ್ಲೋ, ಕ್ಲಿಫರ್ಡ್ ಪಿಂಟೋ, ಅತಿಥಿ ಗುರುಗಳಾದ ಕಿರಣ್ ಲೋಬೊ, ಆಲ್ವಿನ್ ಮಾಡ್ತಾ ಉಪಸ್ಥಿತರಿದ್ದರು. ಕ್ಲಿಫರ್ಡ್ ಪಿಂಟೋ ಮೊಂತಿ ಹಬ್ಬದ ದಿನದ ಮಹತ್ವ ತಿಳಿಸಿದರು. ಕಿರಣ್ ಲೋಬೊ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ, ಪ್ರಧಾನ ಗುರುಗಳಾದ ಫಾ.ವಾಲ್ಟರ್ ಡಿ’ಮೆಲ್ಲೊ ಪ್ರಾರ್ಥನೆ ನಡೆಸಿಕೊಟ್ಟರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಪಾಲನಾ ಮಂಡಳಿ ಸದಸ್ಯರು ಹಾಗೂ 18 ವಾಳೆಯ ಗುರಿಕಾರರು ಸಹಕರಿಸಿದರು.