

ಬೆಂಗಳೂರು: ಉತ್ಕೃಷ್ಟ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿಕೊಂಡು ಇತರೆ ಬ್ಯಾಂಕ್ಗಳಿಗಿಂತ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ರವಿ ಸುಬ್ರಹ್ಮಣ್ಯ ಗುಣಗಾನ ಮಾಡಿದರು.
ವಜ್ರ ಮಹೋತ್ಸವ ನಿಮಿತ್ತ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಲಿ. ಶ್ರೀನಿವಾಸನಗರದ ಶಂಕರ್ನಾಗ್ ವೃತ್ತದ ಬಿಬಿಎಂಪಿ ಆಟದ ಮೈದಾನ(ಡೊಂಕೊಳ್ಳ)ದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯುತ್ಚಾಲಿತ ವಾಹನಗಳ(ಇವಿ) ಪ್ರದರ್ಶನ ಮತ್ತು ಬೃಹತ್ ಸಾಲ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬಗ್ಗೆ ಕಳಕಳಿ ಹಾಗೂ ಆರ್ಬಿಐ ಮಾರ್ಗಸೂಚಿ ಪಾಲಿಸಿಕೊಂಡು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ಬ್ಯಾಂಕ್ ನಡೆಸಿಕೊಂಡು ಬರುತ್ತಿದೆ. ಮಹಿಳೆಯರಿಗೆ, ರೈತರಿಗೆ, ನಿರುದ್ಯೋಗಿಗಳ ಗಮನ ಇಟ್ಟುಕೊಂಡು ಈ ಮೇಳ ಆಯೋಜಿಸಿರುವುದು ಶ್ಲಾಘನೀಯ. ಸಹಕಾರಿ ಕ್ಷೇತ್ರದಲ್ಲಿ ಬೇರೆ ಬ್ಯಾಂಕ್ಗಳಿಗೆ ಹೋಲಿಸಿದರೆ ಈ ಬ್ಯಾಂಕ್ ಆದರ್ಶವಾಗಿದೆ. ಇಂತಹ ಕಾರ್ಯಕ್ರಮಗಳು ನಗರದ ಇತರೆ ಭಾಗಗಳಲ್ಲೂ ನಡೆಯುವಂತಾಗಬೇಕು ಎಂದರು.
"ವಿಜಯವಾಣಿ' ಸಂಪಾದಕ ಕೆ.ಎನ್.ಚನ್ನೇಗೌಡ ಮಾತನಾಡಿ, ಸಹಕಾರಿ ಬ್ಯಾಂಕ್ಗಳ ಮೇಲೆ ಜನರಿಗೆ ನಂಬಿಕೆಯ ಇಲ್ಲದ ದಿನಗಳಲ್ಲಿ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಒಳ್ಳೆಯ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ದಕ್ಷ ಆಡಳಿತ ಮಂಡಳಿ ಇದ್ದರೆ ಬ್ಯಾಂಕ್ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಈ ಬ್ಯಾಂಕ್ ಸಾಕ್ಷಿಯಾಗಿದೆ.ಸರ್ಕಾರಿ ಜಾಗದಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದರೆ ಇವಿ ವಾಹನಗಳ ಖರೀದಿ ಇನ್ನಷ್ಟು ಜಾಸ್ತಿಯಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ಉಪಾಧ್ಯ ರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಸಂಗಾತಿ ವೆಂಕಟೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯ ಜೆ.ಮಂಜುನಾಥ್, ಬ್ಯಾಂಕಿನ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು ಮತ್ತಿತರರಿದ್ದರು.
ಭವಿಷ್ಯದಲ್ಲಿ ಇವಿ ವಾಹನಗಳ ಜಮಾನಾ ಇನ್ನಷ್ಟು ಹೆಚ್ಚಾಗಲಿದೆ.ಪೆಟ್ರೋಲ್, ಡೀಸೆಲ್ನಿಂದ ವಿದ್ಯುತ್ ಚಾಲಿತ ವಾಹನಕ್ಕೆ ಪರಿವರ್ತನೆಯಾಗಬೇಕು. ಬೆಂಗಳೂರಿನ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಇವಿ ವಾಹನಗಳನ್ನು ಬಳಸಬೇಕು. ಇವಿ ಖರೀದಿಗೆ ಮತ್ತು ಸೌರಶಕ್ತಿ ಅಳವಡಿಕೆಗೆ ಕೇಂದ್ರ ನೀಡುತ್ತಿರುವ ಸಬ್ಸಿಡಿಯನ್ನು ಸಾರ್ವಜನಿಕರ ಸದ್ಬಳಕೆ ಮಾಡಿಕೊಳ್ಳಬೇಕು. ದೇಶದಲ್ಲೇ ಮೊದಲ ಬಾರಿಗೆ ಸಹಕಾರ ಬ್ಯಾಂಕ್, ಈ ಮೇಳ ಆಯೋಜಿಸಿರುವುದು ಗಮನಾರ್ಹ.
| ತೇಜಸ್ವಿ ಸೂರ್ಯ, ಸಂಸದ.
ಪ್ರಮುಖ 11 ವಿತರಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಮೇಳದಲ್ಲಿ ವಾಹನಕ್ಕೆ ಖರೀದಿಸುವವರಿಗೆ ಶೇ.9 ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತದೆ. ಮೇಳದಲ್ಲಿ ಸಾಲ ಪಡೆಯುವರಿಗೆ ಸಂಸ್ಕರಣಾ ಶುಲ್ಕ ಪಡೆಯುತ್ತಿಲ್ಲ. ಕೇಂದ್ರ ಸರ್ಕಾರ ವಿದ್ಯುತ್ಚಾಲಿತ ಮೇಲಿನ ನೀಡುವ ಸಬ್ಸಿಡಿಯನ್ನು ಮುಂದುವರಿಸಬೇಕು. ಬಿಬಿಎಂಪಿ, ಬಿಎಂಟಿಸಿ, ಕೆಎಸ್ಆರ್ಟಿಸಿ ಜಾಗದಲ್ಲಿ ಹೆಚ್ಚು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸರ್ಕಾರ ಮುಂದಾಗಬೇಕು. ಇದರಿಂದ ಇವಿ ತಯಾರಿಸುವ ಕಂಪನಿಗಳಿಗೆ ತುಂಬ ಅನುಕೂಲವಾಗಲಿದೆ.
| ಎಂ.ಆರ್.ವೆಂಕಟೇಶ್, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ.