

ಬೆಳ್ತಂಗಡಿ : ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲತೆಗಾಗಿ ಧರ್ಮಸ್ಥಳದಿಂದ ಮೂರು ಹೊಸ ರೂಟ್‌ಗಳ ಬಸ್‌ಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಂಗಳವಾರ ಚಾಲನೆ ನೀಡಿದರು.
ಒಂದು ಬಸ್ ಧರ್ಮಸ್ಥಳದಿಂದ ಪಟ್ರಮೆಗೆ ಕೊಕ್ಕಡ ಸೌತಡ್ಕ ಮಾರ್ಗವಾಗಿ ಸಂಚರಿಸಲಿದೆ. ಧರ್ಮಸ್ಥಳದಿಂದ ಪುತ್ತೂರಿಗೆ ಉಜಿರೆ- ಬೆಳಾಲು- ಬಂದಾರು- ಕುಪ್ಪೆಟ್ಟಿ- ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುತ್ತದೆ. ಧರ್ಮಸ್ಥಳದಿಂದ ನೆಲ್ಯಾಡಿ-ಕುಕ್ಕೆ ಸುಬ್ರಹ್ಮಣ್ಯವಾಗಿ ಕೊಕ್ಕಡ- ನೆಲ್ಯಾಡಿ- ಬಲ್ಯ- ಕಡಬ ಮಾರ್ಗವಾಗಿ ಸಂಚರಿಸಲಿದೆ.
ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಬಂದಾರು ಗ್ರಾಪಂ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಧರ್ಮಸ್ಥಳ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರೀತಮ್, ಪ್ರಮುಖರಾದ ರತ್ಮವರ್ಮ ಜೈನ್, ತಾ.ಪಂ. ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸಹ ಸಂಚಾಲಕ ಸಂದೀಪ್ ರೈ, ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ.ಬಂದಾರು, ಧರ್ಮಸ್ಥಳ ಶಕ್ತಿ ಕೇಂದ್ರ ಪ್ರಮುಖರಾದ ಹರ್ಷಿತ್ ಜೈನ್, ವಿಕ್ರಮ್ ಗೌಡ, ಧರ್ಮಸ್ಥಳ ಪಂಚಾಯಿತಿ ಸದಸ್ಯರಾದ ದಿನೇಶ್ ರಾವ್, ರವಿ ಕುಮಾರ್, ಬಂದಾರು ಗ್ರಾಮಸ್ಥರಾದ ಶ್ರೀಧರ ಗೌಡ, ಡೊಂಬಯ್ಯ ಗೌಡ, ಪ್ರಶಾಂತ್ ಗೌಡ, ಮೋಹನ್ ಬಂಗೇರ, ಪಟ್ರಮೆ ಪಂಚಾಯಿತಿ ಶಕ್ತಿ ಕೇಂದ್ರ ಪ್ರಮುಖರಾದ ಡಾಗಯ್ಯ ಗೌಡ, ಪಟ್ರಮೆ ಗ್ರಾ.ಪಂ. ಸದಸ್ಯ ರಾಜೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಕಮಲಾಕ್ಷ, ಶರತ್, ಶ್ರೀನಿವಾಸ ಗೌಡ ಪಟ್ರಮೆ, ಹರೀಶ್ ಗೌಡ ಶಿಬರಾಜೆ ಮೊದಲಾದವರಿದ್ದರು.