ಮುಳ್ಳೇರಿಯದಲ್ಲಿ ಕಾರಡ್ಕ ಬ್ಲಾಕ್ ಕೃಷಿಕರ ಸಭೆ

New Project (14)
Published on

ಮುಳ್ಳೇರಿಯ: ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕಾರಡ್ಕ ಬ್ಲಾಕ್ ಕೃಷಿಕರ ಸಭೆ ಮುಳ್ಳೇರಿಯದಲ್ಲಿ ನಡೆಯಿತು.

ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಕಡಂಬಳ್ಳಿತ್ತಾಯ ಉದ್ಘಾಟಿಸಿದರು. ಬ್ಲಾಕ್ ಸಮಿತಿ ಅಧ್ಯಕ್ಷರಾಗಿ ಜಗಜೀವನ್ ದಾಸ್ ಶೆಟ್ಟಿ, ಉಪಾಧ್ಯಕ್ಷರಾಗಿ ಮೋಹನನ್ ಆದೂರು, ಜನಾರ್ದನನ್ ಕುತ್ತಿಕೋಲು, ಕಾರ್ಯದರ್ಶಿಗಳಾಗಿ ಪ್ರಶಾಂತ್ ಕಾರಡ್ಕ, ರಾಜನ್ ಕುತ್ತಿಕೋಲು, ಕೋಶಾಧಿಕಾರಿಯಾಗಿ ಶ್ರೀಕೃಷ್ಣ ಭಟ್ ಬಂದಡ್ಕ ಆಯ್ಕೆಯಾದರು.

ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರನ್ ಮುಖ್ಯಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ರಾಮ ಎನ್. ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಡಾ.ಶಿವರಾಯ.ಭಟ್, ಕಾರ್ಯದರ್ಶಿ ಸಚಿನ್ ಕುಮಾರ್ ಎಂ. ಅವರು ಕೃಷಿ, ಕೃಷಿಕರ ಯೋಜನೆ ಬಗ್ಗೆ ನಿರ್ದೇಶನ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net