ಬಿಎಸ್‌ವೈ ಇನ್ಮುಂದೆ ರಾಜ್ಯ ರಾಜಕಾರಣದಲ್ಲಿ ಶ್ರೀಕೃಷ್ಣನ ಪಾತ್ರ ವಹಿಸಲಿದ್ದಾರೆ; ಶಾಸಕ ಎನ್.ಮಹೇಶ್ ಮಾರ್ಮಿಕ ನುಡಿ!

bsy
Published on

ಚಾಮರಾಜನಗರ: ರಾಜ್ಯ ರಾಜಕೀಯದಲ್ಲಿ ಇನ್ನು ಮುಂದೆ ಯಡಿಯೂರಪ್ಪ ಶ್ರೀಕೃಷ್ಣನ ಪಾತ್ರ ವಹಿಸಲಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಗೌಡಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಇದುವರೆಗೆ ಅರ್ಜುನನ ಪಾತ್ರ ನಿರ್ವಹಿಸಿ ಕೆಳಗಿಳಿದಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಪಕ್ಷಗಳು ಅವರ ಕಥೆ ಮುಗಿಯಿತು ಎಂದುಕೊಂಡಿದ್ದವು. ಆದರೆ ಬಿಎಸ್​ವೈ ರಾಜ್ಯ ರಾಜಕೀಯದಲ್ಲಿ ಶ್ರೀಕೃಷ್ಣ ಪಾತ್ರ ವಹಿಸಲಿದ್ದಾರೆ ಎಂದರು.

ಯಡಿಯೂರಪ್ಪ ಬದಲಾವಣೆ ಆಗಿದ್ದಾರೆ, ಕಂಬಳಿ ಹುಳುವಾಗಿದ್ದ ಯಡಿಯೂರಪ್ಪ ಈಗ ಚಿಟ್ಟೆಯಾಗಿ ಬದಲಾಗಿದ್ದಾರೆ. ತಾಯಿ ಹೃದಯ ಇರುವ ವ್ಯಕ್ತಿ ಬಿಎಸ್​ವೈ, ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ. ಅವರನ್ನು ಎಲ್ಲಿಗೆ ತಲುಪಿಸಬೇಕಿತ್ತೋ ಅಲ್ಲಿಗೆ ತಲುಪಿಸಿದ್ದಾರೆ ಎಂದು ಶಾಸಕ ಎನ್. ಮಹೇಶ್ ಹಾಡಿ ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net