ಅಪಘಾತದಲ್ಲಿ ತಂದೆ ಸಾವು, ಹೃದಯಾಘಾತದಿಂದ ತಾಯಿ ಸಾವು... ನೋವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು!

sslc wxam
Published on

ಹಾವೇರಿ: ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತಂದೆ, ತಾಯಿ ಸಾವಿನ ನೋವಿನಲ್ಲೂ ಮಕ್ಕಳು ಎಸ್​ಎಸ್​​ಎಲ್ಸಿ ಪರೀಕ್ಷೆ ಬರೆದಿದ್ದಾರೆ.

ಇಂದು SSLC ಎರಡನೇ ದಿನದ ಇಂಗ್ಲಿಷ್‌ ಭಾಷೆಯ ಪರೀಕ್ಷೆ ಇದ್ದು, ಸಾವಿನ ನೋವಿನಲ್ಲೂ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಿರೆಕೇರೂರು ಪಟ್ಟಣದ ಸಂಗಮೇಶ್ವರ ಕಾಲೇಜಿನಲ್ಲಿ ಪರೀಕ್ಷೆ ಬರೆದ ಮಧು ಅಡಗಂಟಿ ಎಂಬ ವಿದ್ಯಾರ್ಥಿನಿ. ತಂದೆಯ ಸಾವಿನ ಸುದ್ದಿ ತಿಳಿದು ನೋವಿನಲ್ಲೇ ಪರೀಕ್ಷೆ ಬರೆದಿದ್ದಾರೆ.

ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ತಂದೆ ಸಾವನ್ನಪ್ಪಿದ್ದು, ಪರೀಕ್ಷೆ ಮುಗಿಸಿ ಹೊರ ಬರುತ್ತಿದ್ದಂತೆ ತಂದೆ ನೆನೆದು ವಿದ್ಯಾರ್ಥಿನಿ ಕಣ್ಣೀರಿಟ್ಟಿದ್ದಾರೆ.

ಹೃದಯಾಘಾತದಿಂದ ತಾಯಿ ಕಳೆದುಕೊಂಡ ವಿದ್ಯಾರ್ಥಿ:

ಇತ್ತ ಹೃದಯಾಘಾತದಿಂದ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಯೊಬ್ಬ ನೋವಿನಲ್ಲೇ ಪರೀಕ್ಷೆ ಬರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬೆಳಗ್ಗೆ ಹೃದಯಾಘಾತದಿಂದ ಸರಸ್ವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ತಾಯಿಯ ಸಾವಿನ ಸುದ್ದಿ ತಿಳಿದ ಯಶವಂತ ಸಂಶಿ ಎಂಬ ವಿದ್ಯಾರ್ಥಿ ನೋವಿನಲ್ಲೂ ಕೂಡ ಪರೀಕ್ಷೆ ಬರೆದಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳ ಮಾದರಿ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net